Saturday, July 27, 2024
Homeರಾಷ್ಟ್ರೀಯಮೋದಿ ಮತ್ತೆ ಆಕ್ಟಿವ್‌ : ಫಲಿತಾಂಶಕ್ಕೂ ಮೊದಲೇ 100 ದಿನಗಳ ಪ್ಲಾನ್ ರೆಡಿ

ಮೋದಿ ಮತ್ತೆ ಆಕ್ಟಿವ್‌ : ಫಲಿತಾಂಶಕ್ಕೂ ಮೊದಲೇ 100 ದಿನಗಳ ಪ್ಲಾನ್ ರೆಡಿ

ನವದೆಹಲಿ,ಜೂ. 2 (ಪಿಟಿಐ)– ಲೋಕಸಭೆಯ ಫಲಿತಾಂಶದ ನಂತರ ಪ್ರಮಾಣ ವಚನ ಸ್ವೀಕರಿಸಲಿರುವ ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿಯನ್ನು ಪರಿಶೀಲಿಸಲು ಸುದೀರ್ಘ ಚಿಂತನ-ಮಂಥನ ಅಧಿವೇಶನ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಏಳು ಸಭೆ ನಡೆಸಿದ್ದಾರೆ.

ಎಕ್ಸಿಟ್‌ ಪೋಲ್‌ಗಳು ಬಿಜೆಪಿ ನೇತತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲೈಯನ್‌್ಸಗೆ ಭಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದು, ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಂತೆ ಧ್ಯಾನದಿಂದ ಮೇಲೆದ್ದಿರುವ ಮೋದಿ ಅವರು ಹಲವಾರು ಸುತ್ತಿನ ಮಾತುಕತೆ ಆರಂಭಿಸಿದ್ದಾರೆ.

ರೆಮಲ್‌ ಚಂಡಮಾರುತದ ನಂತರ, ವಿಶೇಷವಾಗಿ ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ಈಶಾನ್ಯ ಪ್ರದೇಶದಲ್ಲಿನ ನಂತರದ ಪರಿಣಾಮಗಳನ್ನು ಪರಿಶೀಲಿಸಲು ಮೋದಿ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಜೂನ್‌ 5 ರಂದು ಬರುವ ವಿಶ್ವ ಪರಿಸರ ದಿನವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲು ಸಿದ್ಧತೆಗಳನ್ನು ಪರಿಶೀಲಿಸಲು ಮತ್ತೊಂದು ಸಭೆಯ ಜೊತೆಗೆ ದೇಶದ ಬಿಸಿಗಾಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಕಸರತ್ತು ಪ್ರಾರಂಭವಾಗುವ ಮುಂಚೆಯೇ, ಹೊಸ ಸರ್ಕಾರಕ್ಕೆ 100 ದಿನಗಳ ಕಾರ್ಯಸೂಚಿಯನ್ನು ಸಿದ್ಧಪಡಿಸಲು ಮೋದಿ ಮುಂದಾಗಿದ್ದಾರೆ.ಮೊದಲ 100 ದಿನಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಿಗೆ ಆದ್ಯತೆ ನೀಡುವಂತೆ ಅವರು ತಮ ಮಂತ್ರಿ ಮಂಡಳಿಯನ್ನು ಅವರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News