Saturday, July 27, 2024
Homeಕ್ರೀಡಾ ಸುದ್ದಿಟಿ -20 ವಿಶ್ವಕಪ್‌ : ಕೆನಡಾ ವಿರುದ್ಧ ಅಮೆರಿಕಕ್ಕೆ ಜಯ.

ಟಿ -20 ವಿಶ್ವಕಪ್‌ : ಕೆನಡಾ ವಿರುದ್ಧ ಅಮೆರಿಕಕ್ಕೆ ಜಯ.

ಡಲ್ಲಾಸ್‌‍, ಜೂನ್‌. 2- ಚುಟುಕು ಟಿ20 ವಿಶ್ವಕಪ್‌ ಆರಂಭಗೊಂಡಿದ್ದು ,ಇಂದು ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ಆರನ್‌ ಜೋನ್ಸ್ ಅಜೇಯ 94 ರನ್‌ ನೆರವಿನಿಂದ ಆತಿಥೇಯ ಅಮೆರಿಕ ತಂಡ ಕೆನಡಾ ವಿರುದ್ಧ ಗ್ರೂಪ್‌ ಎ ಕದನದಲ್ಲಿ 7 ವಿಕೆಟ್‌ಗಳ ಸುಲಭ ಜಯದೊಂದಿಗೆ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಕೆನಡಾ 5 ವಿಕೆಟ್‌ಗೆ 194 ರನ್‌ ಗಳಿಸಿ ಒಳ್ಳಯ ಸವಾಲು ನೀಡಿತು.ಪ್ರತ್ಯುತ್ತರವಾಗಿ ಅಮೆರಿಕ ತಮಡದ ಆರಂಭಿಕ ಆಟಗಾರ ಆಂಡ್ರೀಸ್‌‍ (65)ಮತ್ತು ಜೋನ್‌್ಸ (94) ಅವರ ಸ್ಪೋಟಕ ಆಟದ ನೆರವಿನಿಂದ 17.4 ಓವರ್‌ಗಳಲಿ ಗುರಿ ಮುಟಿಟಿದೆ . ಜೋನ್‌್ಸ ಅವರ ಬ್ಯಾಟ್‌ನಿಂದ ಸಿಡಿದ 10 ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ನೆರದಿದ್ದ ಪ್ರೇಕ್ಷಕರನ್ನು ರಂಜಿಸಿತು.

ಕೆನಡಾ ತಮಡ ತಮ ಪವರ್‌ಪ್ಲೇಯನ್ನು ಉತ್ತಮವಾಗಿ ಬಳಸಿಕೊಂಡರು ನವನೀತ್‌ ಧಲಿವಾಲ್‌ (61) ಮತ್ತು ಆರನ್‌ ಜಾನ್ಸನ್‌ (23) ಅವರಿಗೆ ಆಕ್ರಮಣಕಾರಿ ಆರಂಭವನ್ನು ನೀಡಿದರು. ಅದರ ನಂತರ, ನಿಕೋಲಸ್‌‍ ಕಿರ್ಟನ್‌ ಅವರ 31 ಎಸೆತಗಳಲ್ಲಿ 51 ರನ್‌ ಗಳಿಸಿ ಮೊದಲ ಮುಕ್ತಯ ಗೊಳಿಸಿ 194 ರನ್‌ಗೆ ಕೊನೆಯಾಯಿತು.

ಸಂಕ್ಷಿಪ್ತ ಅಂಕಗಳು: ಕೆನಡಾ: 20 ಓವರ್‌ಗಳಲ್ಲಿ 194/5 (ನವನೀತ್‌ ಧಲಿವಾಲ್‌ 61, ನಿಕೋಲಸ್‌‍ ಕಿರ್ಟನ್‌ 51) ಯುಎಸ್‌‍ಎ 7.4 ಓವರ್‌ಗಳಲ್ಲಿ 197/3 (ಆರೋನ್‌ ಜೋನ್‌್ಸ ಔಟಾಗದೆ 94, ಆಂಡ್ರೀಸ್‌‍ ಗೌಸ್‌‍ 65) .ಏಳು ವಿಕೆಟ್‌ಗಳಿಂದ ಕೆನಡಾ ತಂಡವನ್ನು ಮಣ್ಣಿಸಿ ಅಮೆರಿಕ ಪಾಂಯಿಂಟ್‌ ಪಟ್ಟಿಯಲ್ಲಿ ಅಂಕ ಗಳಿಸಿದೆ.

RELATED ARTICLES

Latest News