Friday, November 22, 2024
Homeಬೆಂಗಳೂರುಬೆಂಗಳೂರಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ಮಳೆ

ಬೆಂಗಳೂರಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ಮಳೆ

ಬೆಂಗಳೂರು, ಮೇ.11-ಮಧ್ಯರಾತ್ರಿ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದ 80 ಹೆಚ್ಚು ಕಡೆ ಮರಗಳು ಉರಿಳಿದ್ದು,ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಭಾರಿ ಆವಂತರ ಸೃಷ್ಠಿಸಿದೆ. ಮೈಸೂರು ರಸ್ತೆ,ತುಮಕೂರು ರಸ್ತೆಯಲ್ಲಿ ನದಿ ನೀರುಹೊಳೆಯಂತೆ ಹರಿದು ವಾಹನ ಸವಾರರಿಗೆ ಬೀತಿ ಹುಟ್ಟಿಸಿದೆ.

ನಾಗರಬಾವಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿದ್ದು,ಇಲ್ಲೇ ಸುಮಾರು 10ಕ್ಕೂ ಅಧಿಕ ಮರಗಳು ನೆಲಕ್ಕಚ್ಚಿದೆ ರಸ್ತೆ ನಿಲ್ಲಿಸಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ. ಎನ್‌ಜಿಎ್‌‍ ಬಡಾವಣೆಯ 9ನೇ ಕ್ರಾಸ್‌‍ ನಲ್ಲಿ ವಿದ್ಯತ್‌ಕಂಬದ ಮೇಲೆ ಬೃಹತ್‌ ಮರವೊಂದು ಬಿದ್ದಿದೆ .

ಅದೃಷ್ಠವಶಾತ್‌ ಪಕ್ಕದಲೇ ಇದ್ದ ಶೆಡ್‌ಮೇಲೆ ಬಿದ್ದಿದ್ರೆ ಅಲ್ಲಿ ವಾಸವಿದ್ದ ರಾಯಚೂರು ಮೂಲದ ಕೂಲಿ ಅಪಾಯಕ್ಕೆ ಸಿಲುಕುತ್ತಿದ್ದರು ಶಡ್‌ ಮುಂದೇ ಬಿದ್ದರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಬಿಚ್ಚಿಬಿದ್ದಿದ್ದಾರೆ.

ಚಾಮರಾಜಪೇಟೆಯ ಬಿನ್ನಿ ಮಿಲ್‌ ಬಳಿಯ ಖಾಸಗಿವಸತಿ ಸಮುಚ್ಚಯದಿಮದ ಹರಿದ ನೀರು ಪಕ್ಕದ ರಾಯಪುರ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ನಿವಾಸಿಗಳು ಮಳೆಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ,ಮೈಸೂರು ರಸ್ತೆ ಆರ್‌ಆರ್‌ನಗರ ಆರ್ಚ್‌ ರಸ್ತೆ ಜಲಾವೃತಗೊಂಡಿದ್ದು ವಾಹನ ಚಲಿಸಲಾಗದೆ ಪರದಾಡುವಂತಾಗಿತ್ತು. ಕಾರುಗಳು ಕೊಚ್ಚಿ ಹೋಗುವಂತಾ ಪರಿಸ್ಥತಿ ಉಂಟಾಗಿತ್ತು.

ಇನ್ನು ಪೀಣ್ಯ, ದಾಸರಹಳ್ಳಿ, ಮಲ್ಲಸಂದ್ರ, ಚಿಕ್ಕಬಿದರಕಲ್ಲು ಮೊದಲಾದ ಪ್ರದೇಶಗಳಲೂ ಭಾರಿ ಮಳೆಯಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಆಮೆ ಗತಿಯಲ್ಲಿ ವಾಹನ ಮುಂದೆ ಸಾಗುತ್ತಿತ್ತು 8ನೇ ಮೈಲಿಯ ನವಯುಗ ಟೋಲ್‌ ಪ್ಲಾಜಾದಿಂದ ಮಾದವಾರದವರೆಗೆ ಟ್ರಾಫಿಕ್‌ ಜಾಮ್‌ಆಗಿತ್ತು ಇನ್ನೆರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಮುನ್ಸೂಚನೆ ಇದೆ.

ಬೆಂಗಳೂರುನಲ್ಲಿ ವರ್ಣನ ಆರ್ಭಟಕ್ಕೆ ಜನರು ಬೆಚ್ಚಿದ್ದಾರೆ ಇನ್ನಮುಂಗಾರು ಮಳೆ ಹೇಗಿರುತ್ತೋ ಎಂಬ ಬ ಚಿಂತೆ ಎದುರಾಗಿದೆ .ಸಂಜೆಯಾಗುತ್ತಲೇ ಮಳೆಯಾಗುತ್ತಿದ್ದು ಇಳೆ ತಂಪಾಗುತ್ತಿದೆ,ಬತ್ತಿ ಹೋಗಿದ್ದ ಬೋರ್‌ವೆಲ್‌ ಗಳಿಗೆ ನೀರು ಬಂದಿದೆ.

ಎಲ್ಲಿ ಎಷ್ಟು ಮಳೆ
ಕೆಂಗೇರಿ 89 ಮಿಮೀ.
ಪೀಣ್ಯ ಇಂಡಸ್ಟಿಯಲ್‌ ಏರಿಯಾ 62 ಮಿಮೀ
ನಾಯಂಡನಹಳ್ಳಿ 61.5 ಮಿಮೀ
ಹೆಮಿಗೆಪುರ 61 ಮಿಮೀ

RELATED ARTICLES

Latest News