Saturday, February 24, 2024
Homeಜಿಲ್ಲಾ ಸುದ್ದಿಗಳುಕಾಲು ಜಾರಿ ಬಾವಿಗೆ ಬಿದ್ದು ಆಶಾಕಾರ್ಯಕರ್ತೆ ಸಾವು

ಕಾಲು ಜಾರಿ ಬಾವಿಗೆ ಬಿದ್ದು ಆಶಾಕಾರ್ಯಕರ್ತೆ ಸಾವು

ಮಧುಗಿರಿ/ಕೊರಟಗೆರೆ, ನ.29-ಎಮ್ಮೆ ಮೇಯಿಸುವ ವೇಳೆ ಆಶಾಕಾರ್ಯಕರ್ತೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದ ಮೃತಪಟ್ಟಿರುವ ಘಟನೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಧುಗಿರಿ ತಾಲ್ಲೂಕಿನ ಗಾಲಿಹಳ್ಳಿಯ ವಾಸಿ ಸುನಂದಮ್ಮ (40) ಮೃತ ದುರ್ದೈವಿ. ಸುನಂದಮ್ಮ ಎಮ್ಮೆ ಮೇಯಿಸುತಿದ್ದಾಗ ಎಮ್ಮೆ ರಭಸವಾಗಿ ಹಗ್ಗ ಎಳೆದಿದ್ದುರಿಂದ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಸುನಂದಮ್ಮ ಗಾಲಿಹಳ್ಳಿಯ ಆಶಾ ಕಾರ್ಯಕರ್ತೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಕೊಡಿಗೇನಹಳ್ಳಿ ಪಿಎಸ್‍ಐ ಶ್ರೀನಿವಾಸ್ ಪ್ರಸಾಸ್, ಸಿಬ್ಬಂದಿಗಳಾದ ಜಯರಾಂ, ಮಂಜುನಾಥ್ ಭೇಟಿ ನೀಡಿ ಅಗ್ನಿಶಾಮಕ ಇಲಾಖೆಯ ಸಹಕಾರದಿಂದ ಶವವನ್ನು ಮೇಲೆತ್ತಿ ಮಧುಗಿರಿ ಶವಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News