ಜೈಪುರ,ಅ.20- ತಮ್ಮ ಪ್ರತಿಸ್ಪರ್ಧಿ ವಸುಂಧರಾ ರಾಜೇ ಸಿಂಧಿಯಾ ಅವರಿಗೆ ಬೆಂಬಲ ಸೂಚಿಸುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಬಿಜೆಪಿಯನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ವಸುಂಧರಾ ರಾಜೆ ಅವರನ್ನು ಬದಿಗೊತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಅವರು, ಇದು ಬಿಪಿಯ ಆಂತರಿಕ ವಿಷಯವಾಗಿದೆ ಮತ್ತು ಅದರ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
2020 ರಲ್ಲಿ ಸಚಿನ್ ಪೈಲಟ್ ಮತ್ತು ಅವರ ನಿಷ್ಠಾವಂತರು ನಡೆಸಿದ ದಂಗೆಯ ಸಮಯದಲ್ಲಿ ವಸುಂಧರಾ ರಾಜೆ ಮತ್ತು ಇತರ ಇಬ್ಬರು ಬಿಜೆಪಿ ನಾಯಕರು ತಮ್ಮ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದ್ದಾರೆ ಎಂದು ಈ ವರ್ಷದ ಮೇ ತಿಂಗಳಲ್ಲಿ ಗೆಹ್ಲೋಟ್ ಹೇಳಿಕೊಂಡಿದ್ದರು.
ವಿಜಯದಶಮಿ ನಂತರ ಜೆಡಿಎಸ್ ಪುನರ್ ಸಂಘಟನೆ : ಕುಮಾರಸ್ವಾಮಿ
ನನ್ನ ಸರ್ಕಾರದ ಉಳಿವಿಗೆ ಕಾರಣರಾಗಿದ್ದ ವಸುಂಧರಾ ರಾಜೆ ಅವರಿಗೆ ನನ್ನಿಂದ ಅನ್ಯಾಯವಾಗಬಾರದು ಎಂದು ಗೆಹ್ಲೋಟ್ ಹೇಳಿದ್ದಾರೆ. ಅಶೋಕ್ ಗೆಹ್ಲೋಟ್ ಅವರು 2003 ರಿಂದ ಇದುವರೆಗೆ ಬಹುಮತ ಪಡೆದಿಲ್ಲ. ಅದಕ್ಕಾಗಿಯೇ ಅವರು ನನ್ನನ್ನು ಅವರ ದೊಡ್ಡ ಶತ್ರು ಮತ್ತು ಅವರ ಹಾದಿಗೆ ಕಂಟಕ ಎಂದು ಪರಿಗಣಿಸುತ್ತಾರೆ. ಆದ್ದರಿಂದ ಅವರ ಹೊಗಳಿಕೆಯಲ್ಲಿ ನನಗೆ ಯಾವುದೇ ಸದ್ಭಾವನೆ ಇಲ್ಲ, ಕೇವಲ ದುರುದ್ದೇಶವಿದೆ ಎಂದು ರಾಜೆ ತಿರುಗೇಟು ನೀಡಿದ್ದಾರೆ.