Tuesday, July 23, 2024
Homeಅಂತಾರಾಷ್ಟ್ರೀಯಭಾರತ-ಜರ್ಮನ್ ನಡುವೆ ಬಾಂಧವ್ಯ ಉತ್ತಮವಾಗಿದೆ : ಫಿಲಿಪ್ ಅಕರ್‍ಮನ್

ಭಾರತ-ಜರ್ಮನ್ ನಡುವೆ ಬಾಂಧವ್ಯ ಉತ್ತಮವಾಗಿದೆ : ಫಿಲಿಪ್ ಅಕರ್‍ಮನ್

ನವದೆಹಲಿ,ಅ.20- ಕಳೆದ ವರ್ಷ ಜರ್ಮನಿ ಮತ್ತು ಭಾರತದ ನಡುವಿನ ಬಾಂಧವ್ಯ ಉತ್ತಮವಾಗಿತ್ತು ಮುಂದಿನ ದಿನಗಳಲ್ಲೂ ಈ ಸಂಬಂಧ ಮುಂದುವರೆಯಲಿದೆ ಎಂದು ಜರ್ಮನ್ ರಾಯಭಾರಿ ಫಿಲಿಪ್ ಅಕರ್‍ಮನ್ ಅಭಿಪ್ರಾಯಪಟ್ಟಿದ್ದಾರೆ.ನವದೆಹಲಿಯಲ್ಲಿ ನಡೆದ ಜರ್ಮನಿಯ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷವು ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ತುಂಬಾ ಒಳ್ಳೆಯದಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮ ಹಿಂದಿ ಮಾತನಾಡುವ ಕೌಶಲ್ಯವನ್ನು ಮೆಲುಕು ಹಾಕಿದ ಅಕರ್‍ಮನ, ಪಿಚ್ಲಾ ಸಾಲ್ ಭಾರತ್ ಔರ್ ಜರ್ಮನಿ ಕೆ ಸಂಬಂಧೋ ಕೆ ಲಿಯೆ ಅಚ್ಚಾ ರಹಾ, ಮುಜೆ ಯಾಕೀನ್ ಹೈ ಆನೆ ವಾಲಾ ಸಾಲ್ ಔರ್ ಭಿ ಅಚ್ಚಾ ಹೋಗಾ ಎಂದರು.

ಇಂದು ನಾವು 33 ವರ್ಷಗಳ ಜರ್ಮನ್ ಏಕತೆಯ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಕಳೆದ ವರ್ಷ ಭಾರತ-ಜರ್ಮನಿ ಬಾಂಧವ್ಯಕ್ಕೆ ಉತ್ತಮವಾಗಿತ್ತು, ಮುಂಬರುವ ವರ್ಷವು ಇನ್ನಷ್ಟು ಅದ್ಭುತವಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

41 ರಾಜತಾಂತ್ರಿಕರನ್ನು ಭಾರತದಿಂದ ವಾಪಸ್ ಕರೆಸಿಕೊಂಡ ಕೆನಡಾ

ಜರ್ಮನಿ ತನ್ನ ಏಕತೆಯ 33 ವರ್ಷಗಳನ್ನು ಆಚರಿಸುತ್ತದೆ (ಜರ್ಮನ್ ಯೂನಿಟಿ ಡೇ ಜರ್ಮನಿಯ ರಾಷ್ಟ್ರೀಯ ದಿನ), ಈ ಸಂದರ್ಭದಲ್ಲಿ ದೀರ್ಘ ಭಾಷಣದ ಅಗತ್ಯವಿಲ್ಲ ಎಂದು ಅವರು ಹೇಳಿದರು. ಉತ್ಸಾಹಭರಿತ ಸಂಗೀತದ ಟ್ಯೂನ್‍ಗಳಿಗೆ ಜನರು ನೃತ್ಯ ಮಾಡುತ್ತಿದ್ದಂತೆ ಆಚರಣೆಗಳು ಪೂರ್ಣ ಉತ್ಸಾಹದಿಂದ ನಡೆದವು. ಇದೇ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಕೂಡ ಭಾರತ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ಶ್ಲಾಸಿದರು.

ಜರ್ಮನ್ ಚಾನ್ಸೆಲರ್ ಓಲಾ ಸ್ಕೋಲ್ಜ ಮತ್ತು ಪಿಎಂ ಮೋದಿ ಅವರು ಒಟ್ಟಿಗೆ ಹಲವಾರು ಸಹಕಾರ ಮತ್ತು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಾಲ್ಕನೇ ಮತ್ತು ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಲೇಖಿ ಹೇಳಿದರು.

ಈ ವರ್ಷದ ಮೇ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನ್ ಚಾನ್ಸೆಲರ್ ಓಲಾ ಸ್ಕೋಲ್ಜ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಪ್ರಾದೇಶಿಕ ಬೆಳವಣಿಗೆಗಳು ಮತ್ತು ಜಾಗತಿಕ ಸವಾಲುಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

RELATED ARTICLES

Latest News