Friday, November 22, 2024
Homeಕ್ರೀಡಾ ಸುದ್ದಿ | Sportsಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ಹ್ಯಾಂಗ್‍ಝೌ,ಅ.7-ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ನೂರು ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಏಕೆಂದರೆ, ಭಾರತ ಏಷ್ಯಾಡ್ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು.

14 ನೇ ದಿನದಂದು ಭಾರತದ ಮಹಿಳಾ ಕಬ್ಬಡಿ ತಂಡ ಚಿನ್ನ ಗೆಲ್ಲುವ ಮೂಲಕ ಪದಕಗಳ ಶತಕವನ್ನು ಪೂರೈಸಿತು. ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಲಭಿಸಿದೆ. ಭಾರತ ಇದುವರೆಗೆ ಒಟ್ಟು 100 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳು ಸೇರಿವೆ. ಆರ್ಚರಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಜ್ಯೋತಿ ವೆನ್ನಮ್ ದಿನವನ್ನು ಆರಂಭಿಸಿದರೆ, ಅದಿತಿ ಸ್ವಾಮಿ ಕಾಂಪೌಂಡ್ ಆರ್ಚರಿಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮಹಿಳಾ ಕಬ್ಬಡ್ಡಿ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ಬಹು-ಕ್ರೀಡಾ ಸ್ಪರ್ಧೆಯಲ್ಲಿ 100 ಪದಕಗಳ ಗಡಿಯನ್ನು ತಲುಪಿದೆ. ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ಅವರನ್ನು 149-145 ಸ್ಕೋರ್‍ನಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅದೇ ರೀತಿ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಅದಿತಿ ಗೋಪಿಚಂದ್ ಅವರು ಇಂಡೋನೇಷ್ಯಾದ ಜಿಲಿಝತ್ ಫಡ್ಲಿಯನ್ನು 146-140 ಸ್ಕೋರ್‍ನಿಂದ ಮಣಿಸಿ ಕಂಚಿನ ಪದಕ ಜಯಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸೆಂಚುರಿ ಭಾರಿಸಿದ ಭಾರತ, ಪ್ರಧಾನಿ ಅಭಿನಂದನೆ

ಬೆಳಗ್ಗೆ 7.10ಕ್ಕೆ ನಡೆದ ಪುರುಷರ ಕಂಪೌಂಡ್ ಆರ್ಚರಿ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್ ವರ್ಮ ಮತ್ತು ಓಜಸ್ ಡಿಯೋಟಾಲ್ ಕಾದಾಟ ನಡೆಸಿದರು. ಇದರಲ್ಲಿ ಓಜಸ್ ಡಿಯೋಟಾಲ್ ಚಿನ್ನ ಪದಕ ಗಳಿಸಿದರೆ, ಅಭಿಷೇಕ್ ವರ್ಮ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಓಜಸ್ 2023ರ ಏಷ್ಯನ್ ಗೇಮ್ಸ್‍ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 14-9 ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸಿತು. ಆರಂಭಿಕ ಪಂದ್ಯದಲ್ಲಿ ಉಭಯ ತಂಡಗಳು 34-34 ರಿಂದ ಟೈ ಆಗಿದ್ದವು. ಮೊದಲಾರ್ಧದಲ್ಲಿ ಭಾರತದ ರೈಡರ್ಸ್ ಆರು ಬೋನಸ್ ಅಂಕಗಳನ್ನು ಗಳಿಸಿದರು.

ದ್ವಿತೀಯಾರ್ಧದಲ್ಲಿ ಚೈನೀಸ್ ತೈಪೆ ಮುನ್ನಡೆ ಸಾಧಿಸಿ 16 ಅಂಕ ಗಳಿಸಿದರೆ, ಭಾರತೀಯರು ಕೇವಲ 12 ಅಂಕ ಗಳಿಸಲಷ್ಟೇ ಶಕ್ತರಾದರು. ಆದರೆ, ಭಾರತದ ರೈಡರ್ಸ್ ಎರಡು ಬೋನಸ್ ಅಂಕಗಳನ್ನು ಗಳಿಸಿದರು. ಅಂತಿಮವಾಗಿ ಮೊದಲಾರ್ಧದಲ್ಲಿನ ತಮ್ಮ ಅಮೋಘ ಪ್ರದರ್ಶನದಿಂದಾಗಿ, ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಬಡ್ಡಿ ಆಟಗಾರರು ಚೈನೀಸ್ ತೈಪೆ ವಿರುದ್ಧ 26-25 ಅಂತರದಿಂದ ಜಯಗಳಿಸಿ ಚಿನ್ನದ ಪದಕ ಪಡೆದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, ಸಂಪೂರ್ಣ ಪ್ರಾಬಲ್ಯ! ನಮ್ಮ ಮಹಿಳಾ ಕಬಡ್ಡಿ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ, ಚೈನೀಸ್ ತೈಪೆ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಮಹಿಳಾ ತಂಡದ ಅಪ್ರತಿಮ ಕೌಶಲ್ಯ, ದೃಢತೆ ಮತ್ತು ಟೀಮ್ ವರ್ಕ್ ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಮತ್ತು ಭಾರತವು ಇದುವರೆಗೆ 100 ಪದಕಗಳು ಜಯಸಿದೆ ಎಂದು ಹೇಳಿದೆ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

ಮಧ್ಯಾಹ್ನ 12.30ರಿಂದ ಪುರುಷರ ವಿಭಾಗದಲ್ಲಿ ಇರಾನ್ ವಿರುದ್ಧ ಫೈನಲ್ ಕಬಡ್ಡಿ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಬೆಳಗ್ಗೆ 11.30ರಿಂದ ಪುರುಷರ ವಿಭಾಗದ ಕ್ರಿಕೆಟ್‍ನಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ. ಹಾಕಿ, ಚೆಸ್ ಮತ್ತು ಬ್ಯಾಡ್ಮಿಂಟನ್‍ನಿಂದ ತಲಾ ಒಂದೊಂದು ಪದಕ ಖಚಿತವಾಗಿದೆ. ಈ ಬಾರಿ ನೂರಕ್ಕಿಂತ ಹೆಚ್ಚು ಪದಕಗಳು ಖಚಿತವಾಗಿದೆ. ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ.

RELATED ARTICLES

Latest News