Saturday, May 11, 2024
Homeರಾಷ್ಟ್ರೀಯಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ನವದೆಹಲಿ, ಅ.7- ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವ ಬೆದರಿಕೆಯ ಇ-ಮೇಲ್ ತಲ್ಲಣ ಸೃಷ್ಟಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬೆದರಿಕೆ ಇಮೇಲ್ ಸ್ವೀಕರಿಸಿದೆ ಎಂದು ಹೇಳಿದೆ. ಎನ್‍ಐಎಗೆ ಬಂದಿರುವ ಬೆದರಿಕೆ ಇಮೇಲ್ ನಲ್ಲಿ ನಿಮ್ಮ ಸರ್ಕಾರದಿಂದ ನಮಗೆ 500 ಕೋಟಿ ರೂಪಾಯಿ ನೀಡಬೇಕು. ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು ಎಂದು ಬರೆಯಲಾಗಿದೆ.

ಇ-ಮೇಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಮತ್ತು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಸರ್ಕಾರದಿಂದ 500 ಕೋಟಿ ರೂ.ಗಳ ಬೇಡಿಕೆ ಇಡಲಾಗಿದೆ. ಹಣ ಪಾವತಿ ಜತೆಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‍ರನ್ನು ಬಿಡುಗಡೆ ಮಾಡಬೇಕು ಎಂದೂ ಬರೆಯಲಾಗಿದೆ.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಬೆದರಿಕೆ ಇಮೇಲ್ ಬಗ್ಗೆ ಎನ್‍ಐಎ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗುಜರಾತ್ ಪೊಲೀಸರನ್ನು ಹೊರತುಪಡಿಸಿ, ಪ್ರಧಾನಿ ಮೋದಿಯವರ ಭದ್ರತೆಗೆ ಸಂಬಂಸಿದ ಹಲವು ಏಜೆನ್ಸಿಗಳಿಗೆ ಈ ಬೆದರಿಕೆ ಇಮೇಲ್ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

2023ರ ವಿಶ್ವಕಪ್‍ನ ಹಲವು ಪಂದ್ಯಗಳು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಬೆದರಿಕೆಯ ಇ-ಮೇಲ್ ಎಲ್ಲಿಂದ ಬಂದಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಎಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಅ.5ರಂದು ಬೆಳಿಗ್ಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‍ಗೆ ಬೆದರಿಕೆ ಇ-ಮೇಲ್ ಬಗ್ಗೆ ಎನ್‍ಐಎ ಎಚ್ಚರಿಕೆ ಸ್ವೀಕರಿಸಿದೆ.

ನಮಗೆ ನಿಮ್ಮ ಸರ್ಕಾರದಿಂದ 500 ಕೋಟಿ ರೂ. ಬೇಕು. ಬಂಧನದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾಳೆ ನರೇಂದ್ರ ಮೋದಿ ಜೊತೆಗೆ ನರೇಂದ್ರ ಮೋದಿ ಸ್ಟೇಡಿಯಂಅನ್ನು ಸ್ಪೋಟಿಸುತ್ತೇವೆ. ಭಾರತದಲ್ಲಿ ಎಲ್ಲವೂ ಮಾರಾಟವಾಗಿದೆ, ಆದ್ದರಿಂದ ನಾವೂ ಏನು ಬೇಕಾದರೂ ಖರೀದಿಸುತ್ತೇವೆ. ನೀವು ಎಷ್ಟೇ ರಕ್ಷಿಸಿದರೂ ಏನೂ ಮಾಡಲಾಗುವುದಿಲ್ಲ. ಅವರನ್ನು ನಮ್ಮಿಂದ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮಾತನಾಡಲು ಬಯಸಿದರೆ ಈ ಮೇಲ್‍ನಲ್ಲಿ ಮಾತ್ರ ಮಾತನಾಡಿ ಎಂದು ಬರೆಯಲಾಗಿದೆ.

ಚೀನಾಗೆ ಮಾಹಿತಿ ನೀಡಿದ ಅಮೆರಿಕದ ಸಾರ್ಜೆಂಟ್ ಬಂಧನ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯವು ಅ.5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಲಾರೆನ್ಸ್ ಬಿಷ್ಣೋಯ್ 2014 ರಿಂದ ಜೈಲಿನಲ್ಲಿದ್ದಾರೆ. ಅವರು ಜೈಲಿನ ಒಳಗಿನಿಂದ ತನ್ನ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದಾನೆ ಎನ್ನಲಾಗುತ್ತಿದೆ. ಲಾರೆನ್ಸ್ ವಿರುದ್ಧ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮೂಸೆವಾಲಾ ಮೇಲಿನ ದಾಳಿಯ ಹೊಣೆಯನ್ನು ಲಾರೆನ್ಸ್ï ಬಿಷ್ಣೋಯ್ ವಹಿಸಿಕೊಂಡಿದ್ದರು.

RELATED ARTICLES

Latest News