ತಿನ್ಸುಕಿಯಾ, ನ.23 (ಪಿಟಿಐ) ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಸೇನಾ ಶಿಬಿರದ ಗೇಟ್‍ನ ಹೊರಗೆ ಗ್ರೆನೇಡ್ ಸ್ಪೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿನ್ನೆ ಸಂಜೆ ಡಿರಾಕ್‍ನಲ್ಲಿರುವ ಸೇನಾ ಶಿಬಿರದ ಗೇಟ್‍ಗಳ ಮುಂದೆ ಸೋಟ ಸಂಭವಿಸಿದೆ ಎಂದು ಅವರು ಹೇಳಿದರು. ನಮ್ಮ ಮಾಹಿತಿಯ ಪ್ರಕಾರ, ಇಬ್ಬರು ಮೋಟಾರ್‌ಸೈಕಲ್‌ನಲ್ಲಿ ಬಂದ ವ್ಯಕ್ತಿಗಳು ಶಿಬಿರದೊಳಗೆ ಗ್ರೆನೇಡ್ ಅನ್ನು ಎಸೆಯಲು ಪ್ರಯತ್ನಿಸಿದರು ಆದರೆ ಅದು ಹೊರಗೆ ಬಿದ್ದು ಸ್ಪೋಟಗೊಂಡಿದೆ ಎಂದು ಅವರು ಹೇಳಿದರು.
ಹೈದರಾಬಾದ್ : ಸಚಿವ ಜಮೀರ್ ತಂಗಿದ್ದ ಹೊಟೇಲ್ ಮೇಲೆ ಪೊಲೀಸರ ದಾಳಿ
ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಅಪರಾಗಳನ್ನು ಹಿಡಿಯಲು ಶೋಧವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. ಅಸ್ಸಾಂನ ನಾಲ್ಕು ಜಿಲ್ಲೆಗಳಾದ ದಿಬ್ರುಗಢ್, ತಿನ್ಸುಕಿಯಾ, ಶಿವಸಾಗರ್ ಮತ್ತು ಚರೈಡಿಯೊ ಜಿಲ್ಲೆಗಳಿಗೆ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆಯನ್ನು ಜಾರಿಗೆ ತರಲಾಗಿದೆ.