ಬೆಂಗಳೂರು, ಅ.18- ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಳುಗಳಿಗೆ ಶೇ.2ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರದಲ್ಲಿ 19 ಏಷಿಯನ್ ಗೇಮ್ಸ್‍ನಲ್ಲಿ ವಿಜೇತರಾದ ಎಂಟು ಮಂದಿ ಕ್ರೀಡಾಪಟುಗಳು ಹಾಗೂ ಮೂವರು ಕೋಚ್‍ಗಳನ್ನು ಸನ್ಮಾನಿಸಿದರು.
ಚೀನಾ ಹಾಂಗ್‍ಝೌನಲ್ಲಿ ಸೆಪ್ಟಂಬರ್ .23ರಿಂದ ಅಕ್ಟೋಬರ್ 8ರವರೆಗೂ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕ ಸೇರಿ ಭಾರತೀಯ ಕ್ರೀಡಾಳುಗಳು 107 ಪದಕ ಗೆದ್ದರಿಂದ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಪಡೆಯುವಂತೆ ಮಾಡಿದ್ದಾರೆ. ಕರ್ನಾಟಕದ ಕೀಡಾಪಟುಗಳ ಪೈಕಿ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಗೆದ್ದಿದ್ದಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸ್ಪರ್ಧೆ ಇರುತ್ತದೆ. ಅಲ್ಲಿ ಚಿನ್ನ, ಬೆಳ್ಳಿ ಪದಕ ಗೆಲ್ಲುವುದು ಸಾಧನೆಯಲ್ಲ. ನಿಮ್ಮ ಪರಿಶ್ರಮದ ಫಲ ಇದೆ. ಮುಂದಿನ ಒಲಿಂಪಿಕ್‍ನಲ್ಲೂ ಭಾಗವಹಿಸಿ ಇನ್ನಷ್ಟು ಪದಕಗಳನ್ನು ಗೆದ್ದು ನಾಡಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿ ಎಂದು ಹಾರೈಸಿದರು.
ಪ್ರಸ್ತುತ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ.3 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇತರ ಇಲಾಖೆಗಳಲ್ಲಿಯೂ ಶೇ.2 ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶ ಮತ್ತು ರಾಜ್ಯದ ಗೌರವ ಹೆಚ್ಚು ಮಾಡಿದ್ದೀರಿ. ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಬಾರಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಭಾರತೀಯ ಕ್ರೀಡಾಪಟುಗಳು ಅಧಿತ್ಯಕ ಪದಕಗಳನ್ನು ಗೆದ್ದಿದ್ದಾರೆ. ಕಳೆದ ಬಾರಿ 70, ಈ ಬಾರಿ 107 ಪದಕ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಏಷ್ಯನ್ ಗೇಮ್ಸ್‍ನಲ್ಲಿಯೂ ಮೊದಲ-ಎರಡನೇ ಸ್ಥಾನ ಬಂದರೆ ಗೌರವ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡಲು ಬದ್ಧವಾಗಿದ್ದು, ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಹುಮಾನ ಮೊತ್ತ ನೀಡುವ ಕುರಿತು ಘೋಷಿಸಲಾಗಿತ್ತು. ಅತಿ ಹೆಚ್ಚು ಮೊತ್ತದ ಬಹುಮಾನ ಘೋಷಿಸಿದ ಮೊದಲ ರಾಜ್ಯ ನಮ್ಮದು ಎಂದು ಅವರು ವಿವರಿಸಿದರು.
ಪದಕ ವಿಜೇತರು:
ಕ್ರಿಕೆಟ್‍ನಲ್ಲಿ ಚಿನ್ನ ಗೆದ್ದ ರಾಜೇಶ್ವರಿ ಗಾಯಕ್ವಾಡ್ ಪರವಾಗಿ ಅವರ ಸಹೋದರಿ ಭುವನೇಶ್ವರಿ ಗಾಯಕ್ ವಾಡ್ ಸನ್ಮಾನ ಸ್ವೀಕರಿಸಿದರು. ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, ಅಥ್ಲೇಟಿಕ್ಸ್ ಪುರುಷರ 4400 ಮೀಟರ್ ರಿಲೆಯಲ್ಲಿ ಮಿಜೋ ಚಾಕೋ ಕುರಿಯನ್, ನಿಹಾಲ್‍ಜೋಯಲ್ ಚಿನ್ನದ ಪದಕ ಗೆದ್ದಿದ್ದಾರೆ. ಬ್ಯಾಡ್ಮಿಂಟನ್‍ನಲ್ಲಿ ಮಿಥುನ್ ಮಂಜುನಾಥ್, ಸಾಯಿ ಪ್ರತೀಕ್, ಗಾಲನಲ್ಲಿ ಅದಿತಿ ಅಶೋಕ್ ಬೆಳ್ಳಿ ಪದಕ ಗೆದ್ದಿದ್ದಾರೆ. ಕುಮಾರಿ ದಿವ್ಯ ಶೂಟಿಂಗ್ ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ತಲಾ ಒಂದು ಪದಕಕ್ಕೆ 15 ಲಕ್ಷದಂತೆ 30 ಲಕ್ಷ ರೂಪಾಯಿಯ ಚೆಕ್ ವಿತರಿಸಲಾಯಿತು.
“ಕಾಂಗ್ರೆಸ್ ಬಂದಿದೆ, ಲೂಟಿ ಜೋರಾಗಿದೆ, ಹೈಕಮಾಂಡ್ ಜೇಬು ತುಂಬಿದೆ”
ತರಬೇತುದಾರರಾದ ಕಬ್ಬಡಿ ಕ್ರೀಡೆಯ ವಿ.ತೇಜಸ್ವಿನಿ, ಹಾಕಿ ತರಬೇತುದಾರರಾದ ಬಿ.ಎಸ್.ಅಂಕಿತ, ಬಾಕ್ಸಿಂಗ್ ತರಬೇತುದಾರರಾದ ಸಿ.ಎ.ಕುಟ್ಟಪ್ಪ ಅವರಿಗೂ 5 ಲಕ್ಷ ರೂಪಾಯಿ ನಗದು ಪುರಷ್ಕಾರ ನೀಡಿ ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ಕೃಷಿ ಸಚಿವ ಚಲುವರಾಯಸ್ವಾಮಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ನಸೀರ್ ಅಹ್ಮದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.