Friday, December 6, 2024
Homeರಾಷ್ಟ್ರೀಯ | Nationalಅಯೋಧ್ಯೆ ರಾಮ ಜನ್ಮಭೂಮಿ ಆವರಣದಲ್ಲಿ ಅರ್ಚಕರೊಬ್ಬರು ಶವ ಪತ್ತೆ

ಅಯೋಧ್ಯೆ ರಾಮ ಜನ್ಮಭೂಮಿ ಆವರಣದಲ್ಲಿ ಅರ್ಚಕರೊಬ್ಬರು ಶವ ಪತ್ತೆ

ಅಯೋಧ್ಯೆ,ಆ.19- ಇಲ್ಲಿನ ಹನುಮಾನ್‍ಗರ್ಹಿ ದೇವಸ್ಥಾನದ ಅರ್ಚಕರೊಬ್ಬರು ಇಂದು ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಕತ್ತು ಸೀಳಿ ಶವವಾಗಿ ಪತ್ತೆಯಾಗಿದ್ದಾರೆ. ಪರಿಚಿತರೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ತನಿಖಾಧಿಕಾರಿಗಳು ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಕೊಲೆಯಾದ ಅರ್ಚಕ ರಾಮ್ ಸಹ್ರೇದಾಸ್(44) ಅವರ ಕೊಠಡಿಗೆ ಯಾರೊಬ್ಬರು ಒಳಪ್ರವೇಶಿಸಲು ನಿರ್ಬಂಧಿಸಿದ್ದಾರೆ.

ದಾಸ್ ಹನುಮಾನ್ ಗರ್ಹಿ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ಇಬ್ಬರು ಶಿಷ್ಯರೊಂದಿಗೆ ತಂಗಿದ್ದರು, ಅವರು ಪ್ರಮುಖ ಶಂಕಿತರಾಗಿದ್ದಾರೆ. ಶಂಕಿತರಲ್ಲಿ ಒಬ್ಬನನ್ನು ವಿಚಾರಗೊಳಪಡಿಸಲಾಗಿದೆ. ಎರಡನೆ ಶಂಕಿತ ಆರೋಪಿ ಕಾಣೆಯಾಗಿದ್ದು, ಈತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅೀಧಿಕ್ಷಕ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.

ಡಾಬರ್ ಉತ್ಪನ್ನಗಳ ವಿರುದ್ಧ ಅಮೆರಿಕ, ಕೆನಡಾದಲ್ಲಿ ಕೇಸ್

ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ತಮಗೆ ಮಾಹಿತಿ ನೀಡಲಾಯಿತು. ಬೆಳಗಿನ ಪ್ರಾರ್ಥನೆಗೆ ಹಾಜರಾಗದ ಹಿನ್ನೆಲೆಯಲ್ಲಿ ದಾಸ್ ಅವರ ದೇಹವು ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಾಸ್ ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕರಲ್ಲಿ ಒಬ್ಬರಾಗಿದ್ದರು.

ದಾಸ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ಹತ್ಯೆಯ ಹಿಂದಿನ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತಿದ್ದು, ನಿನ್ನೆ ರಾತ್ರಿ ದಾಸ್ ಮತ್ತು ಅವರ ಶಿಷ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದುಬಂದಿದೆ.

RELATED ARTICLES

Latest News