Friday, November 22, 2024
Homeರಾಜಕೀಯ | Politicsಅಯೋಧ್ಯೆಯತ್ತ ಹರಿದು ಬರತ್ತಲೇ ಇದೆ ಭಕ್ತ ಸಾಗರ

ಅಯೋಧ್ಯೆಯತ್ತ ಹರಿದು ಬರತ್ತಲೇ ಇದೆ ಭಕ್ತ ಸಾಗರ

ಅಯೋಧ್ಯೆ,ಜ.24- ರಾಮ ಲಲ್ಲಾನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಂದಿರ ಉದ್ಘಾಟನೆಗೊಂಡ ಒಂದು ದಿನದ ನಂತರ ಸುಮಾರು 5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಯೋಧ್ಯೆಯಲ್ಲಿ ಮೈ ಕೊರೆಯುವ ಚಳಿ ಇದ್ದರೂ ಭಕ್ತರ ದಂಡು ಆಗಮಿಸುತ್ತಲೆ ಇದ್ದು, ಇಂದು ಕೂಡ ರಾಮನ ದರ್ಶನಕ್ಕೆ ಭಕ್ತ ಸಾಗರ ಕಾದು ನಿಂತಿದೆ.

ಇಂದು ಬೆಳಗ್ಗೆಯೂ ದೇವಾಲಯದ ಹೊರಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ.ಹರಿದು ಬರುತ್ತಿರುವ ಭಕ್ತ ಸಾಗರವನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಧಾನ ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉನ್ನತ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಅಯೋಧ್ಯೆಗೆ ಕಳುಹಿಸಿದೆ.

ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ನನ್ನನ್ನು ಇಲ್ಲಿಗೆ ಕಳುಹಿಸಲಾಗಿದೆ. ನಾವು ಜನಸಂದಣಿ ನಿರ್ವಹಣೆಗಾಗಿ ನಾವು ಸರದಿ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ನಾವು ಜನರಿಗಾಗಿ ಚಾನಲ್‍ಗಳನ್ನು ಮಾಡಿದ್ದೇವೆ ಎಂದು ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2024)

ಉತ್ತರ ಪ್ರದೇಶ ಪೊಲೀಸ್, ರಾಪಿಡ್ ಆಕ್ಷನ್ ಫೋರ್ಸ್ (ಆರ್‍ಎಎಫ್), ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‍ಎಸ್‍ಬಿ) ಯ ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ. ಎಂಟು ಮ್ಯಾಜಿಸ್ಟ್ರೇಟ್‍ಗಳು ದೇವಾಲಯದ ವಿವಿಧ ಸ್ಥಳಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಅಯೋಧ್ಯೆಯ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಕುಮಾರ್ ಅವರು, ಜನರು ಎರಡು ವಾರಗಳ ನಂತರ ಮಂದಿರ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಿ ಯಾವುದೆ ಅತುರ ಸಲ್ಲದು ಎಂದು ಮನವಿ ಮಾಡಿಕೊಂಡಿದ್ದಾರೆ. ದೇವಾಲಯದ ಆವರಣದಲ್ಲಿ ವಿಶೇಷವಾಗಿ ಭಕ್ತರು ದರ್ಶನಕ್ಕೆ ತೆರಳುವ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಯುಪಿ ಪೊಲೀಸ್ ಮುಖ್ಯಸ್ಥ ವಿಜಯ್ ಕುಮಾರ್ ಈ ಹಿಂದೆ ಭರವಸೆ ನೀಡಿದ್ದರು.

RELATED ARTICLES

Latest News