ನವದೆಹಲಿ,ಸೆ.26- ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಿಗಧಿತ ಸಮಯದಲ್ಲಿ ಪೂರ್ಣಗೊಳ್ಳಲಿದ್ದು, ಬರುವ ಜನವರಿಯಲ್ಲಿ ಲೋಕಾರ್ಪಣೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ದೇವಾಲಯದ ನಿರ್ಮಾಣವು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಟ್ರಸ್ಟ್ ಹೇಳಿದೆ.
ನೆಲ ಅಂತಸ್ತಿನ ಕಾಮಗಾರಿಯನ್ನು ನವೆಂಬರ್‍ನಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಮೊದಲ ಅಂತಸ್ತಿನ ಶೇ.50ರಷ್ಟು ಪಿಲ್ಲರ್‍ಗಳು ಪೂರ್ಣಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ಮೊದಲ ಮಹಡಿಯ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಟ್ರಸ್ಟ್ ಹೊಂದಿದ್ದು, 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ.
ಈ ಹಿಂದೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ 2024 ರ ಜನವರಿ 21-23 ರಂದು ದೇವಾಲಯದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ ಎಂದು ಘೋಷಿಸಿತ್ತು. 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಪವಿತ್ರ ಸಮಾರಂಭಕ್ಕೆ ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ 25,000 ಸಂತರ ಜೊತೆಗೆ, 10,000 ವಿಶೇಷ ಅತಿಥಿಗಳು ಸಹ ಇರುತ್ತಾರೆ.
ಸೆ.29 ರಂದು ಕರ್ನಾಟಕ ಬಂದ್ ಫಿಕ್ಸ್
ರಾಮ ಜನ್ಮಭೂಮಿಯ ಶಂಕುಸ್ಥಾಪನೆ ಸಮಾರಂಭವು ಮುಂದಿನ ವರ್ಷ ಜನವರಿ ಮೂರನೇ ವಾರದಲ್ಲಿ ನಡೆಯಲಿದೆ. ಮೂರು ದಿನಾಂಕಗಳನ್ನು – 21, 22 ಮತ್ತು 23 ಜನವರಿ – ಶಂಕುಸ್ಥಾಪನೆ ಸಮಾರಂಭಕ್ಕೆ ನಿಗದಿಪಡಿಸಲಾಗಿದೆ. ಸಮಾರಂಭಕ್ಕೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇವೆ, ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದು ರಾಮಮಂದಿರ ಟ್ರಸ್ಟ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟನೆಗೂ ಮುನ್ನ ಅಯೋಧ್ಯೆಯನ್ನು ಸುಂದರಗೊಳಿಸಲು ಮತ್ತು ಅತ್ಯಾಧುನಿಕ ನಗರ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.