Thursday, February 22, 2024
Homeಸಂಪಾದಕೀಯ-ಲೇಖನಗಳುರಾಮಮಂದಿರ ನಿರ್ಮಾಣದ ಮೂಲಕ ದೇಶ, ದೇಹ, ಮನಸ್ಸುಗಳ ಶುದ್ಧೀಕರಣ ಮಾಡಿದ ನಮೋ

ರಾಮಮಂದಿರ ನಿರ್ಮಾಣದ ಮೂಲಕ ದೇಶ, ದೇಹ, ಮನಸ್ಸುಗಳ ಶುದ್ಧೀಕರಣ ಮಾಡಿದ ನಮೋ

ಬೆಂಗಳೂರು, ಜ.24- ರಾಮಾ ಈ ಪುಣ್ಯ ಪುರುಷನಿಂದಲೇ ಮಂದಿರ ಆಗಬೇಕು ಅಂತ 500 ವರ್ಷ ಕಾದೆಯೇನೋ ಅಲ್ವಾ ? ಹೆಚ್ಚಿನವರು ವೃದ್ಧಾಪ್ಯದ ನೆಪ ಹೇಳಿ, ಸುತ್ತಮುತ್ತಲಿನ ಜನರಿಗೆ ಕಿರಿಕಿರಿ ಮಾಡುತ್ತಾ, ನೂರೆಂಟು ಮಾತ್ರೆ ನುಂಗುತ್ತಾ ಬದುಕುವುದರಿಂದ ನಿವೃತ್ತರಾಗುವ ವಯಸ್ಸಿನಲ್ಲಿ ಮೋದಿಯಂಥ ಮಹಾನುಭಾವ ನಮಗೆಲ್ಲರಿಗೂ ನಾಚಿಕೆಯಾಗುವಂತೆ ನಿಟ್ಟುಪವಾಸ ಮಾಡುತ್ತಾರೆ..!

ಕೊರೆಯುವ ಛಳಿಯನ್ನು ಲೆಕ್ಕಿಸದೆ ತಣ್ಣೀರು ಸ್ನಾನ ಮಾಡುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸಮುದ್ರದಲ್ಲಿ ಮುಳುಗುತ್ತಾರೆ.ನೆಲದ ಮೇಲೆ ಮಲಗುತ್ತಾರೆ. ದೇಶದ ಉದ್ದಗಲಕ್ಕೂ ನೀ ನಡೆದ ಹೆಜ್ಜೆಗಳಲ್ಲಿ ಉದ್ದಂಡ ನಮಸ್ಕರಿಸುತ್ತಾರೆ. ಈ ಸಮಯದಲ್ಲಿ ನಾವು ಬದುಕಿz್ದÉವು ಅನ್ನುವುದೇ ರೋಮಾಂಚನಕಾರಿ ಎಂದು ಅಂಕಣಕಾರ್ತಿ ಪಲ್ಲವಿ ರಾವ್ ಹೇಳುವ ಮೂಲಕ ಪ್ರಧಾನಿ ಮೋದಿ ಅವರ ಉಪವಾಸ ವ್ರತವನ್ನು ಅಣಕಿಸಿರುವ ಮಾಜಿ ಸಿಎಂ ವೀರಪ್ಪಮೊಯ್ಲಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಇಡೀ ದೇಶ ರಾಮನಾಮದ ಅದ್ಭುತ ಅನುಭಾವದಲ್ಲಿ ಮಿಂದೇಳುತ್ತಿದೆ. ಇದೆಲ್ಲವುದಕ್ಕೂ ಕಳಶವಿಟ್ಟಂತೆ ಈ ದೇಶದ ಪ್ರಜಾ ನಾಯಕ ಸಂಪ್ರದಾಯಗಳನ್ನು ಚಾಚೂ ತಪ್ಪದೆ ದೇಹ-ಮನಸ್ಸುಗಳ ಶುದ್ಧೀಕರಣಕ್ಕೆ ತೊಡಗಿದ್ದಾರೆ. ಲ್ಯೂಟನ್ ಲಾನುಗಳಲ್ಲಿ ವಿದೇಶಿ ವಿಸ್ಕಿ ಕುಡಿಯುತ್ತ… ಭರ್ಜರಿ ಟೀ-ಷರ್ಟ್ಗಳಲ್ಲಿ ದೇಶದ ದಾರಿದ್ರ್ಯವನ್ನು ಬಿಬಿಸಿ ಸಂದರ್ಶನಗಳಲ್ಲಿ ವರ್ಣಿಸುತ್ತಾ… ಸೇನೆಯ ವಿಮಾನ, ಹಡಗು ಎಲ್ಲವನ್ನೂ ತಮ್ಮ ಸ್ವೇಚ್ಛಾಚಾರಕ್ಕೆ ಬಳಸುತ್ತಾ ಇರುವವರನ್ನೇ ನಾಯಕರು ಅಂತ ನಂಬಿದ್ದ ನಾಚಿಕೆಗೇಡಿನ ಕರಾಳ ದಿನಗಳ ನೆನಪೂ ಅಳಿಸಿ ಹೋಗುವಂತೆ- ದೇಶದ ದೇಗುಲಗಳನ್ನು ಮಾತ್ರ ಅಲ್ಲ, ಮನಸ್ಸುಗಳನ್ನು ದಶಕಗಳಿಂದ ಹತ್ತಿದ್ದ ಸೆಕ್ಯುಲರ್ ಕಿಲುಬು ಕೊಳೆ ಅಂಧಕಾರವನ್ನೂ ರಾಮ ನೀನು ತೊಳೆಸುತ್ತಿದ್ದೀಯ ಎಂದು ಚಾಟಿ ಬೀಸಿದ್ದಾರೆ.

ಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ

ಒಳಗಿನ ನೀನು ಜಾಗೃತವಾಗದೇ 73ರ ಹರೆಯದಲ್ಲಿ ಈ ಪರಿಯ ೀಃಶಕ್ತಿ ಸಾಧ್ಯವೇ ಇಲ್ಲ! ಅನ್ನೋದು ನನ್ನ ನಂಬಿಕೆ ರಾಮಾ ಮತ್ತೆ ಮತ್ತೆ ಎಲ್ಲ ಚಾನೆಲ್ಗಳಲ್ಲಿ , ಪತ್ರಿಕೆಗಳಲ್ಲಿ, ವಾಟ್ಸಾಪ್ಗಳಲ್ಲಿ ನನ್ನ ಪ್ರಧಾನಿಯನ್ನು ನೋಡುತ್ತೇನೆ.ಮನಸ್ಸು ಮೂಕವಾಗುತ್ತದೆ, ಕಣ್ಣು ಅಪ್ರಯತ್ನ ಪೂರ್ವಕವಾಗಿ ತುಂಬುತ್ತದೆ, ಹೃದಯದಾಳದಿಂದ ರಾಮಾ… ಈ ನಮ್ಮ ನಾಯಕನಿಗೆ ಈ ದೇಶದಲ್ಲಿ ಇನ್ನೂ ಉಳಿದಿರುವ ರಾವಣ ಸಂತಾನಗಳನ್ನು ನಿರ್ನಾಮ ಮಾಡುವ, ಭರತ ಭೂಮಿಯನ್ನು ಒಡೆಯುವ ಎಲ್ಲ ವಿಚ್ಛಿದ್ರಶಕ್ತಿಗಳನ್ನೂ ಆಮೂಲಾಗ್ರ ನಾಶ ಮಾಡುವ ಶಕ್ತಿ , ಆರೋಗ್ಯ, ಆಯಸ್ಸು , ನಿನ್ನ ಅಪಾರ ಕೃಪೆ ಎಲ್ಲವೂ ಸದಾ ಇರಲಿ!
ಸನಾತನ ಧರ್ಮ ಸದಾಕಾಲ ಮನುಷ್ಯನ ಚೇತನವನ್ನು ಉನ್ನತಿಯೆಡೆ ಪ್ರಚೋದಿಸುತ್ತಲೇ ಇರಲಿ ಅನ್ನುವ ಆರ್ತ ಪ್ರಾರ್ಥನೆ ಹೊರ ಹೊಮ್ಮುತ್ತದೆ.

ರಾಮಾ… ನೀನು ನಡೆದ ಈ ಪುಣ್ಯ ಭೂಮಿ ಮತ್ತೊಮ್ಮೆ ಮಹತ್ತಿನೆಡೆ ಹೊರಳುವತ್ತ ಹೆಜ್ಜೆ ಇಡುತ್ತಿದೆ! ರಾಮರಾಜ್ಯವಾಗಲು ಮೋದಿಯಂತಹ ನಾಯಕರು ಈ ನೆಲದ ಎಲ್ಲ ಮೂಲೆಗಳನ್ನೂ ಆಳಬೇಕು. ಅದಕ್ಕೆ ನೀನು ಮನಸ್ಸು ಮಾಡಬೇಕು ಎಂದು ಪ್ರಾರ್ಥಿಸಿದ್ದಾರೆ.
ಶಬರಿ, ಅಹಲ್ಯೆಯ ಕಾಯುವಿಕೆಗೆ ಕರಗಿದವನು ನೀನು! ಭರತ ಭೂಮಿಯ ಉದ್ದಗಲಕ್ಕೂ ಮËನವಾಗಿ ಮೊರೆಯಿಡುತ್ತಿರುವ ಕೋಟಿ ಕೋಟಿ ರಾಮ ಭಕ್ತರ ಮೊರೆಗೆ ಕರಗದಿರಲಾರೆಯಾ ?

ನೀ ನಡೆದ ಈ ನೆಲದ ಮೇಲೆ, ನಂಬಿಕೆಗಳ ಮೇಲೆ, ಜೀವನ ಪದ್ಧತಿಯ ಮೇಲೆ, ಪರಂಪರೆಗಳ ಮೇಲೆ ನಿರಂತರ ದಾಳಿಗಳು, ದಾರಿ ತಪ್ಪಿಸುವಿಕೆಗಳು, ಮಾಡದೆ ಇರುವ ತಪ್ಪುಗಳಿಗೆ ದೂಷಣೆ, ಅವಮಾನಗಳು, ಕ್ಷಾತ್ರವನ್ನೂ, ಧರ್ಮವನ್ನೂ ಕುಗ್ಗಿಸುವ ನಿರಂತರ ಆಘಾತಗಳು ಇಂದಿಗೂ ನಡೆದೇ ಇವೆ. ನೀನು ಕೃಪೆ ಮಾಡಿದಲ್ಲದೆ ಇದು ಧರ್ಮ ರಾಜ್ಯವಾಗುಳಿಯಲು, ರಾಮ ನಾಮ ನಿರಂತರ ಅನುರಣಿಸಲು ಅಸಾಧ್ಯ.

ನೀನು ಮನಸ್ಸು ಮಾಡಿದರೆ ನಿನ್ನ ಈ ಕರುಣೆಗೆ ನಾವು ಅರ್ಹರಾಗುತ್ತೇವೆ. ನನ್ನ ದೇಶದಲ್ಲಿ ಧರ್ಮವನ್ನು, ದೇಶವನ್ನು ಉಳಿಸಲೆಂದೇ ಬಂದ ಈ ನಾಯಕನಿಗೆ ನನ್ನದೂ ಆಯಸ್ಸು, ಆರೋಗ್ಯ, ಶಕ್ತಿ ಎಲ್ಲವುದನ್ನೂ ಕೊಡು. ನಮಗೆ ಇಂತಹ ನಾಯಕರನ್ನು ಉಳಿಸಿಕೊಳ್ಳುವ ಯೋಗ ಕೊಡು!

ಇದು ಕೇವಲ ಪಲ್ಲವಿ ರಾವ್ ಮಾತುಗಳಷ್ಟೇ ಅಲ್ಲ! ದೇಶದ ಅಭಿವೃದ್ಧಿಯನ್ನು, ಸನಾತನ ಧರ್ಮದ ಉದ್ಧಾರವನ್ನು ಬಯಸುವ ಪ್ರತಿಯೊಬ್ಬ ಪ್ರಾಮಾಣಿಕ ದೇಶಭಕ್ತನ ಅಂತರಾಳದ ಮಾತುಗಳು ನನ್ನ ಮೂಲಕ ಮಾರ್ದನಿಸಿದೆ ಅಂತ ಅನಿಸಿಕೆ!
ಜೈ ಶ್ರೀರಾಮ..!

Source : Whatsapp

RELATED ARTICLES

Latest News