Monday, January 13, 2025
Homeರಾಷ್ಟ್ರೀಯ | Nationalಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

ಅಜಂಗಢ, ಅ.11 –ಉತ್ತರ ಪ್ರದೇಶದ ಅಜಂಗಢ ಜಿಲ್ಲೆ ಬರ್ದಾನ್ ಪ್ರದೇಶದ ಕುಶಾಲ್‍ಗಾಂವ್ ಗ್ರಾಮದ ಕೊಳದಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮನೆಯ ಸಮೀಪವೇ ಇರುವ ಕೊಳದಲ್ಲಿ ನೆನ್ನೆ ಸಂಜೆ ಸ್ನಾನ ಮಾಡಲು ಬಾಲಕರು ತೆರಳಿದ್ದು ರಾತ್ರಿಯಾದರೂ ಮಕ್ಕಳು ಕಾಣದಿದ್ದಾಗ ಪೋಷಕರು ಆತಂಕಗೊಂಡಿದ್ದಾರೆ.

ನಂತರ ಕೊಳದ ಬಳಿ ಇದ್ದ ಬಟ್ಟೆಯನ್ನು ನೋಡಿ ನೀರಿನಲ್ಲಿ ಮುಳುಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಏಳರಿಂದ 10 ವರ್ಷದೊಳಗಿನ ಮಕ್ಕಳ ಶವಗಳನ್ನು ನಂತರ ಗ್ರಾಮಸ್ಥರು ನೀರಿನಿಂದ ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ದುರಂತ ಸಾವಿಗೆ ಇಡೀ ಗ್ರಾಮದ ಜನರು ಕಂಬನಿ ಮಿಡಿದಿದ್ದಾರೆ.

ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಕರೆ ನೀರು ಕಮ್ಮಿಯಿತ್ತು ಆದರೆ ಕೆಸರಿನಲ್ಲಿ ಸಿಲುಗಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News