Thursday, December 26, 2024
Homeಅಂತಾರಾಷ್ಟ್ರೀಯ | International70 ಮಂದಿ ಪ್ರಯಾಣಿಕರಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಕಝಾಕಿಸ್ತಾನದಲ್ಲಿ ಪತನ..!

70 ಮಂದಿ ಪ್ರಯಾಣಿಕರಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಕಝಾಕಿಸ್ತಾನದಲ್ಲಿ ಪತನ..!

Azerbaijan Airlines passenger plane with over 70 on board crashes in Kazakhstan

ಅಕ್ಟೌ(ಕಜಕೀಸ್ಥಾನ), ಡಿ.25– ಕಜಕೀಸ್ಥಾನದ ಅಕ್ಟೌ ನಗರದ ಬಳಿ 72 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಗರಿಕ ವಿಮಾನ ತಾಂತ್ರಿಕ ಕಾರಣಗಳಿಂದಾಗಿ ತುರ್ತು ಭೂ ಸ್ಪರ್ಶದ ವೇಳೆ ಅಪಘಾತಕ್ಕೊಳಗಾಗಿದ್ದು ಬಹುತೇಕ ಪ್ರಯಾಣಿಕರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

ಅಜರ್‌ಬೈಜಾನ್ ದೇಶಕ್ಕೆ ಸೇರಿದ ಎಂಬರರ್‌ ಸಂಸ್ಥೆಗೆ ಸೇರಿದ 8243 ಸಂಖ್ಯೆಯ ವಿಮಾನ ಸಿಬ್ಬಂದಿ ಒಳಗೊಂಡರೆ 72 ಮಂದಿಯನ್ನು ಬಕುನಿಂದ ರಷ್ಯಾದ ಬ್ರೌನ್‌ಜಿಲ್‌ಗೆ ಕರೆದೊಯ್ಯುತ್ತಿತ್ತು. ವ್ಯಾಪಕ ಮಂಜು ಮುಸುಕಿನ ವಾತಾವರಣದಿಂದಾಗಿ ವಿಮಾನದ ಮಾರ್ಗ ಬದಲಾವಣೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಜರ್‌ಬೈಜಾನ್ ದೇಶದ ಅಧ್ಯಕ್ಷ ಯೂವಾಮ್‌ ಅಲಿಯೇಒ ಅವರು ರಷ್ಯಾದ ಸಿಐಎಸ್‌‍ ಶೃಂಗದಿಂದ ಅರ್ಧಕ್ಕೆ ಹೊರನಡೆದಿದ್ದು, ಸ್ವದೇಶಕ್ಕೆ ಮರಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ 25 ಮಂದಿ ಬುದುಕುಳಿದಿದ್ದು, ಹಲವಾರು ಜನರು ಸಾವನ್ನಪ್ಪಿರುವುದಾಗಿ ಕಜಕೀಸ್ಥಾನದ ತುರ್ತು ಸೇವಾ ಸಚಿವಾಲಯ ಮಾಹಿತಿ ನೀಡಿದೆ.
ಅಕ್ಟೌ ನಗರದ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದ ಕಾರಣಕ್ಕಾಗಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸುವಾಗ ವೇಳೆ ನೆಲಕ್ಕಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ವಿಮಾನ ಎರಡು ಭಾಗಗಳಾಗಿ ತುಂಡಾಗಿದ್ದು, ಒಂದು ಇಂಜಿನ್‌ ಭಾಗದಲ್ಲಿ ಬೆಂಕಿ ಉರಿಯುತ್ತಿದೆ. ಪ್ರಯಾಣಿಕರ ಭಾಗ ನೆಲಕ್ಕಪ್ಪಳಿಸಿದ್ದರಿಂದ ಅಪಘಾತದ ತೀವ್ರತೆ ಹೆಚ್ಚಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಅಣತಿ ದೂರದಲ್ಲೇ ಸಂಭವಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ವಿಮಾನದಲ್ಲಿ ಅಜರ್‌ಬೈಜಾನ್ ದೇಶದ 37, ರಷ್ಯಾದ 16, ಕಜಕೀಸ್ಥಾನದ 6, ಕಿರ್ಜಿಕಿಸ್ತಾನದ 3 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Latest News