Thursday, December 7, 2023
Homeಮನರಂಜನೆಈ ವಾರ ತೆರೆ ಮೇಲೆ ಗಣೇಶನ 'ಬಾನ ದಾರಿಯಲಿ' ಪಯಣ ಆರಂಭ

ಈ ವಾರ ತೆರೆ ಮೇಲೆ ಗಣೇಶನ ‘ಬಾನ ದಾರಿಯಲಿ’ ಪಯಣ ಆರಂಭ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ ಬಾನ ದಾರಿಯಲಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈಗಾಗಲೆ ಹಾಡುಗಳು ಮತ್ತು ಟ್ರೈಲರ್‍ನಿಂದ ಭಾರೀ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಗೋಲ್ಡನ್ ಸ್ಟಾರ್‍ಗೆ ದೊಡ್ಡ ಹಿಟ್ ಕೊಡುವ ಮುನ್ಸೂಚನೆ ಕೊಟ್ಟಿದೆ.ಅವರೇ ಹೇಳುವ ಹಾಗೆ,ಇದು ನಾನು ಈವರೆಗೂ ಮಾಡಿರದ ಪಾತ್ರ ಬಾನ ದಾರಿಯಲಿ ಪ್ರೀತಿಯ ಬಗೆಗಿನ ಚಿತ್ರ.

ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ ಬಾನ ದಾರಿಯಲಿ ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ನಾನು ಮುಂಚಿನಿಂದ ಸ್ನೇಹಿತರು. ನಮ್ಮ ಕಾಂಬಿನೇಷನ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ, ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ.

ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ನಮ್ಮ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ನಾಯಕಿಯರು, ರಂಗಾಯಣ ರಘು ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎನ್ನುತ್ತಾರೆ.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಕೆಆರ್‍ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಗಣೇಶ್ ಅಭಿಮಾನಿಗಳಲ್ಲಿ ಕುತೂಹಲವನ್ನುಂಟುಮಾಡಿದೆ. ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಗಣೇಶ್ ಜೋಡಿಯಾಗಿ ಅಭಿನಯಿಸಿದ್ದು ಹಾಡುಗಳಲ್ಲಿ ತುಂಬಾ ಮುದ್ದಾಗಿ ಕಾಣ್ತಾರೆ. ಸೊಗಸಾದ ಸಂಗೀತಕ್ಕೆ ಕಾರಣ ಅರ್ಜುನ್ ಜನ್ಯ.

ಹೆಚ್ಚು ಆಕ್ಷನ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಪ್ರೇಮ ಕಥೆಗೆ ಪೆನ್ನು ಹಿಡಿದಿದ್ದಾರೆ.ಹೆಚ್ಚು ಎಮೋಷನ್ ಕಥೆಗಳನ್ನು ಪರದೆ ಮೇಲೆ ತಂದಿದ್ದ ನಿರ್ದೇಶಕ ಪ್ರೀತಮ್ ಗುಬ್ಬಿ ಮೊಟ್ಟ ಮೊದಲಬಾರಿಗೆ ಎಮೋಷನ್ ಅಂಡ್ ಲವ್‍ಅನ್ನು ಬ್ಲೆಂಡ್ ಮಾಡಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಇನ್ನು ವಿತರಣೆಯ ಜವಾಬ್ದಾರಿಯನ್ನು ಹೊತ್ತ ಕೆಆರ್‍ಜಿ ಸ್ಟುಡಿಯೋಸ್ ನ ವಿತರಣೆಯ ನೂರನೆಯ ಚಿತ್ರ. ಚಿತ್ರವನ್ನು ನೋಡಿದ್ದೇನೆ ಅದ್ಭುತವಾಗಿ ಮೂಡಿಬಂದಿದೆ. ನೋಡುವ ಸಂದರ್ಭದಲ್ಲಿ ಕಣ್ಣಲ್ಲಿ ನೀರು ಬರುತ್ತಿತ್ತು ಎಂಬ ಮಾತನ್ನು ಯೋಗಿ ಹೇಳಿಕೊಂಡಿದ್ದರು.

RELATED ARTICLES

Latest News