Friday, June 21, 2024
Homeಅಂತಾರಾಷ್ಟ್ರೀಯಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿಯಲು ಹಡಗಿನ ಮಾಲೀಕರ ನಿರ್ಲಕ್ಷ್ಯವೇ ಕಾರಣ

ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ ಕುಸಿಯಲು ಹಡಗಿನ ಮಾಲೀಕರ ನಿರ್ಲಕ್ಷ್ಯವೇ ಕಾರಣ

ಬಾಲ್ಟಿಮೋರ್,ಏ.23- ಕಳೆದ ತಿಂಗಳು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದು ಅದು ಮುರಿದುಬೀಳಲು ಕಾರಣವಾಗಿದ್ದ ಬೃಹತ್ ಕಂಟೈನರ್ ಹಡಗಿನ ಮಾಲೀಕ ಮತ್ತು ವ್ಯವಸ್ಥಾಪಕರನ್ನೇ ಈ ದುರ್ಘಟನೆಗೆ ಹೊಣೆ ಮಾಡಬೇಕು ಎಂದು ಬಾಲ್ಟಿಮೋರ್‍ನ ಮೇಯರ್ ಮತ್ತು ಸಿಟಿ ಕೌನ್ಸಿಲ್‍ನ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಲ್ಲಿ ತಿಳಿಸಲಾಗಿದೆ.

ಈ ಎರಡು ಕಂಪನಿಗಳು ಮಾರ್ಚ್ 26 ರಂದು ಸಂಭವಿಸಿದ ಸೇತುವೆ ಕುಸಿತದ ಪ್ರಕರಣದಲ್ಲಿ ತಮ್ಮನ್ನು ಹೊಣೆಗಾರರನ್ನಾಗಿಸಬಾರದೆಂದು ಕೋರಿ ಅರ್ಜಿ ಸಲ್ಲಿಸಿದವು. ಇತಿಹಾಸದಲ್ಲೇ ಅತಿ ದುಬಾರಿ ಕಡಲ ದುರಂತಗಳಲ್ಲಿ ಒಂದೆನಿಸಿರುವ ಈ ಅವಘಡಕ್ಕೆ ಯಾರು ಜವಾಬ್ದಾರರು, ಅವರ ಹೊಣೆಗಾರಿಕೆ ಎಷ್ಟು ಎಂಬ ಕುರಿತು ಮೇರಿಲ್ಯಾಂಡ್‍ನ ಉಚ್ಚ ನ್ಯಾಯಾಲಯ ನಿರ್ಧರಿಸುತ್ತದೆ.

ಕಡಲ ತಡಿಯಾಚೆಗೆ ನುಗ್ಗಿ ಸೇತುವೆಗೆ ಡಿಕ್ಕಿ ಹೊಡೆದ ಹಡಗು ಡಾಲಿಯ ಮಾಲಿಕತ್ವ ಸಿಂಗಪೂರ್ ಮೂಲದ ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್‍ನದ್ದಾಗಿದ್ದು ಸಿಂಗಾಪುರದ್ದೇ ಆಗಿರುವ ಸೈನರ್ಜಿ ಮರೀನ್ ಪ್ರೈ.ಲಿ. ಹಡಗಿನ ವ್ಯವಸ್ಥಾಪಕ ಸಂಸ್ಥೆಯಾಗಿತ್ತು.

ಡಾಲಿ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ ಮತ್ತು ಸಮರ್ಥ ಚಾಲಕ ಸಿಬ್ಬಂದಿಯನ್ನು ಹೊಂದಿರಲಿಲ್ಲ. ಈ ಅಂಶಗಳನ್ನು ನಿರ್ಲಕ್ಷಿಸಿ ಈ ಕಂಪನಿಗಳು ದುರಂತಕ್ಕೆ ಕಾರಣವಾಗಿವೆ ಎಂದು ನಗರದ ಪರ ವಕೀಲರು ಹೇಳಿಕೆ ನೀಡಿದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಂಪನಿಗಳ ವಕ್ತಾರ ಸೋಮವಾರ ಹೇಳಿದ್ದಾರೆ.

RELATED ARTICLES

Latest News