Wednesday, September 11, 2024
Homeಬೆಂಗಳೂರುಪೊಲೀಸರ ಬಲೆಗೆ ಮೊಬೈಲ್ ದರೋಡೆಕೋರರು : 15.40 ಲಕ್ಷ ಮೌಲ್ಯದ 72 ಮೊಬೈಲ್‍ಗಳ ಜಪ್ತಿ

ಪೊಲೀಸರ ಬಲೆಗೆ ಮೊಬೈಲ್ ದರೋಡೆಕೋರರು : 15.40 ಲಕ್ಷ ಮೌಲ್ಯದ 72 ಮೊಬೈಲ್‍ಗಳ ಜಪ್ತಿ

ಬೆಂಗಳೂರು,ಆ.20-ನಗರ ಪೊಲೀಸರು ಮೊಬೈಲ್ ಕಳವು ಹಾಗೂ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಐದು ಮಂದಿಯನ್ನು ಬಂ„ಸಿ 15.40 ಲಕ್ಷ ಮೌಲ್ಯದ 72 ಮೊಬೈಲ್‍ಗಳನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ಳಂದೂರು: ಗ್ರಾಹಕರು ಆನ್‍ಲೈನ್ ಮೂಲಕ ಮೊಬೈಲ್ ಫೋನ್ ಬುಕ್ ಮಾಡಿ ನಂತರ ಅನ್ಯ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡುವಂತಹ ಮೊಬೈಲ್‍ಗಳನ್ನು ಸಂಬಂಧಪಟ್ಟ ಕಂಪನಿಗೆ ಹಿಂದಿರುಗಿಸದೆ ತಮ್ಮ ಬಳಿಯೇ ಇಟ್ಟುಕೊಂಡು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಆರೋಪಿಯೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ ವಿವಿಧ ಕಂಪನಿಯ 44 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬಲೂರು ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ಕಡಿಮೆ ದರದಲ್ಲಿ ಮೊಬೈಲ್ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಮೊಬೈಲ್‍ಗಳಿದ್ದ ಬ್ಯಾಗ್‍ನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆತ ಡೆಲವರಿ ಡಾಟ್‍ಕಾಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಇನ್‍ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ವೈಟ್‍ಫೀಲ್ಡ್: ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೇಬುಗಳಿಂದ ಮೊಬೈಲ್ ಫೋನ್‍ಗಳನ್ನು ಪಿಕ್‍ಪಾಕೆಟ್ ಮಾಡುತ್ತಿದ್ದ ಮೂವರನ್ನು ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ 1.40 ಲಕ್ಷ ರೂ. ಮೌಲ್ಯದ 5 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವರ್ತೂರಿನ ಲೇಬರ್‍ಶೆಡ್‍ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಕೆಲಸ ಮುಗಿಸಿಕೊಂಡು ವರ್ತೂರು ಕೋಡಿಗೆ ತೆರಳಲು ಓ -Áರಂ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಅವರ ಮೊಬೈಲ್ ಫೋನ್ ಕಳವಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಒಂದು ಮೊಬೈಲ್ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ವಿಚಾರಣೆಗೊಳಪಡಿಸಿದಾಗ ಮತ್ತೊಬ್ಬ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಆತನನ್ನೂ ವಶಕ್ಕೆ ಪಡೆದು, ಎರಡು ದ್ವಿಚಕ್ರ ವಾಹನ ಮತ್ತು ವಾಹನದ ಡಿಕ್ಕಿಯಲ್ಲಿದ್ದ 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್‍ಸ್ಪೆಕ್ಟರ್ ಗುರುಪ್ರಸಾದ್ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

ಪೀಣ್ಯ: ನಡೆದುಹೋಗುವ ಸಾರ್ವಜನಿಕರನ್ನೇ ಗುರಿಯಾಗಿಸಿ ಕೊಂಡು ಮೊಬೈಲ್ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ ವಿವಿಧ ಕಂಪನಿಯ 23 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂಪನಿಯ ಉದ್ಯೋಗಿಯೊಬ್ಬರು ಎನ್‍ಟಿಟಿಎ-ï ಬಸ್ ನಿಲ್ದಾಣದ ಬಳಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದರೋಡೆಕೋರರು ದುಬಾರಿ ಬೆಲೆಯ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ ಚೊಕ್ಕಸಂದ್ರ ಕೆರೆ ರಸ್ತೆ ಬಳಿ ಆರೋಪಿಯೊಬ್ಬನನ್ನು ದ್ವಿಚಕ್ರ ವಾಹನ ಸಮೇತ ಬಂಧಿಸಿ 4 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಹಲವಾರು ಮೊಬೈಲ್‍ಗಳನ್ನು ಸುಲಿಗೆ ಮಾಡಿರುವ ಬಗ್ಗೆ ತಿಳಿಸಿದ ಮೇರೆಗೆ ಮಂಗಳೂರು ನಗರದ ಮೊಬೈಲ್ ಅಂಗಡಿಯಿಂದ 12 ಮೊಬೈಲ್ ಹಾಗೂ ಆರೋಪಿ ವಾಸವಿದ್ದ ಹೆಗ್ಗನಹಳ್ಳಿಯ ಮನೆಯಿಂದ 7 ಮೊಬೈಲ್ ಸೇರಿದಂತೆ ಒಟ್ಟು 23 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ. ಇನ್‍ಸ್ಪೆಕ್ಟರ್ ಅನಿಲ್‍ಕುಮಾರ್ ಮತ್ತು ಸಿಬ್ಬಂದಿ ಪ್ರಕರಣವನ್ನು ಬೇ„ಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News