Thursday, November 21, 2024
Homeಅಂತಾರಾಷ್ಟ್ರೀಯ | Internationalಭಾರತ ಮೇಲೆ ಬಾಂಗ್ಲಾ ದೇಶಿಯರಿಗೆ ಕೋಪ ಇಲ್ಲ, ಆದರೆ ನೋವಾಗಿದೆ ; ಮೊಯೀನ್‌ ಖಾನ್‌

ಭಾರತ ಮೇಲೆ ಬಾಂಗ್ಲಾ ದೇಶಿಯರಿಗೆ ಕೋಪ ಇಲ್ಲ, ಆದರೆ ನೋವಾಗಿದೆ ; ಮೊಯೀನ್‌ ಖಾನ್‌

Bangladeshis ‘not angry but hurt’: Top BNP leader on Hasina’s stay in India

ಢಾಕಾ, ಆ. 23 (ಪಿಟಿಐ) ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತದಲ್ಲಿ ಉಳಿದುಕೊಂಡಿರುವ ಬಗ್ಗೆ ಬಾಂಗ್ಲಾದೇಶಿಯರು ಕೋಪಗೊಂಡಿಲ್ಲ ಆದರೆ ನೋವು ಅನುಭವಿಸುತ್ತಿದ್ದಾರೆ ಎಂದು ಬಾಂಗ್ಲಾದ ಬಿಎನ್‌ಪಿ ನಾಯಕರೊಬ್ಬರು ಹೇಳಿದ್ದಾರೆ. ಮಾತ್ರವಲ್ಲ ಅವರು ನವದೆಹಲಿಯ ರಾಜಕಾರಣಿಗಳು ಮತ್ತು ಭದ್ರತಾ ತಂತ್ರಜ್ಞರನ್ನು ತಮ ನೀತಿಯನ್ನು ಮರುಚಿಂತನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಢಾಕಾದಲ್ಲಿನ ತಮ ನಿವಾಸದಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಬಾಂಗ್ಲಾದೇಶದ ಮಾಜಿ ಕ್ಯಾಬಿನೆಟ್‌ ಸಚಿವ ಅಬ್ದುಲ್‌ ಮೊಯೀನ್‌ ಖಾನ್‌ ಅವರು, ತಮ ದೇಶವು ಭಾರತದೊಂದಿಗೆ ಮೂರು ಕಡೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಅದು ದೊಡ್ಡ ನೆರೆಹೊರೆಯಾಗಿದೆ, ಅದು ನಮ ಮಿತ್ರರಾಷ್ಟ್ರ ಹಾಗಾಗಿ ನಾವು ಹಸೀನಾ ಅವರಿಗೆ ಆಶ್ರಯ ನೀಡಿರುವುದಕ್ಕೆ ಕೋಪಗೊಂಡಿಲ್ಲ ಆದರೆ, ಅದರ ಬಗ್ಗೆ ನಮಗೆ ವಿಷಾದವಿದೆ ಎಂದಿದ್ದಾರೆ.

ಆ.5 ರಂದು ಭಾರತಕ್ಕೆ ಬಂದಿಳಿದಿರುವ ಹಸೀನಾ ಅವರು ಪ್ರಸ್ತುತ ಅಲ್ಲಿಯೇ ಉಳಿದುಕೊಂಡಿದ್ದಾರೆ, ಭಾರತದಲ್ಲಿ ಅವರ ಎರಡು ವಾರಗಳ ಅವಧಿಯ ಉಪಸ್ಥಿತಿಯು ಇಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಸ್ತುತ ಪರಿಸ್ಥಿತಿಯು ಬಲವರ್ಧನೆ ಮತ್ತು ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಖಾನ್‌ ಹೇಳಿದರು.

ಮುಖ್ಯ ಸಲಹೆಗಾರ ಮುಹಮದ್‌ ಯೂನಸ್‌‍ ನೇತತ್ವದ ಮಧ್ಯಂತರ ಸರ್ಕಾರವು ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಚುನಾವಣಾ ಸುಧಾರಣೆಗಳು ಅವರ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.

RELATED ARTICLES

Latest News