Wednesday, September 11, 2024
Homeಕ್ರೀಡಾ ಸುದ್ದಿ | Sportsಧೋನಿ ಕ್ಷಮೆ ಕೇಳಿದ ದಿನೇಶ್‌ ಕಾರ್ತಿಕ್‌

ಧೋನಿ ಕ್ಷಮೆ ಕೇಳಿದ ದಿನೇಶ್‌ ಕಾರ್ತಿಕ್‌

Dinesh Karthik apologises for omitting MS Dhoni

ನವದೆಹಲಿ, ಆ.23- ತಮ್ಮ ಸಾರ್ವಕಾಲಿಕ ಭಾರತ ಎಲೆವೆನ್‌ ತಂಡದಿಂದ ಧೋನಿ ಅವರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿಲ್ಲ ಎಂದು ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಸ್ಪಷ್ಟನೆ ನೀಡಿದ್ದಾರೆ.

ಭಾರತ ಎಲೆವೆನ್‌ ತಂಡದಿಂದ ಧೋನಿ ಅವರನ್ನು ಕೈಬಿಟ್ಟಿದ್ದ ಕಾರ್ತಿಕ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕ್ಲಾಸ್‌‍ ತೆಗೆದುಕೊಂಡ ನಂತರ ಸ್ಪಷ್ಟನೆ ನೀಡಿರುವ ಅವರು ನಾನು ಧೋನಿ ಅವರನ್ನು ಮರೆತಿದ್ದೇ ಉದ್ದೇಶಪೂರ್ವಕವಾಗಿ ಅವರನ್ನು ನಾನು ಕೈಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡುವುದರ ಜೊತೆಗೆ ಆಗಿರುವ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ಭಾಯ್‌ ಲಾಗ್‌ ಬ್ಯಾಡ್‌ ಗಲ್ಟಿ ಹೋಗಯಾ (ಹುಡುಗರೇ ನಾನು ದೊಡ್ಡ ತಪ್ಪು ಮಾಡಿದೆ.) ನಿಜವಾಗಿ ಇದು ತಪ್ಪಾಗಿದೆ ಎಂದು ಕಾರ್ತಿಕ್‌ ಕ್ರಿಕ್‌ಬಜ್‌ನಲ್ಲಿನ ವೀಡಿಯೊದಲ್ಲಿ ಹೇಳಿದ್ದಾರೆ. ನಾನು ಭಾರತ ಎಲೆವೆನ್‌ ತಂಡ ಹಾಕಿದಾಗ ನಾನು ವಿಕೆಟ್‌ಕೀಪರ್‌ ಅನ್ನು ಮರೆತಿದ್ದೇನೆ.

ಅದಷ್ಟವಶಾತ್‌ ರಾಹುಲ್‌ ದ್ರಾವಿಡ್‌ ಅಲ್ಲಿದ್ದರು ಮತ್ತು ನಾನು ಅರೆಕಾಲಿಕ ವಿಕೆಟ್‌ಕೀಪರ್‌ನೊಂದಿಗೆ ಹೋಗುತ್ತಿದ್ದೇನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿಜವಾಗಿ ನಾನು ಮಾಡಲಿಲ್ಲ. ರಾಹುಲ್‌ ದ್ರಾವಿಡ್‌ ಒಬ್ಬ ವಿಕೆಟ್‌ ಕೀಪರ್‌ ಎಂದು ನೀವು ನಂಬುತ್ತೀರಾ, ನಾನು ವಿಕೆಟ್‌ ಕೀಪರ್‌ ಅನ್ನು ಮರೆತಿದ್ದೇನೆ ಎಂದು ಕಾರ್ತಿಕ್‌ ಹೇಳಿದರು.

ಧೋನಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ನಾನು ಆ ತಂಡವನ್ನು ಮತ್ತೆ ಮಾಡಬೇಕಾದರೆ, ನಾನು ಒಂದು ಬದಲಾವಣೆ ಮಾಡುತ್ತೇನೆ. ಧೋನಿಗೆ ಯಾವ ಆಟಗಾರನು ದಾರಿ ಮಾಡಿಕೊಡುತ್ತಾನೆ ಎಂಬುದನ್ನು ಕಾರ್ತಿಕ್‌ ನಿರ್ದಿಷ್ಟಪಡಿಸಿಲ್ಲ.

ದಿನೇಶ್‌ ಕಾರ್ತಿಕ್‌ ಅವರ ಸಾರ್ವಕಾಲಿಕ ಭಾರತ ಎಲೆವೆನ್‌ ತಂಡದಲ್ಲಿ ರೋಹಿತ್‌ ಶರ್ಮಾ, ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ರವೀಂದ್ರ ಜಡೇಜಾ (ಎಂಎಸ್‌‍ ಧೋನಿ ಹೊಸ ಸೇರ್ಪಡೆ), ರವಿಚಂದ್ರನ್‌ ಅಶ್ವಿನ್‌, ಅನಿಲ್‌ ಕುಂಬ್ಳೆ, ಜಸ್ಪ್ರೀತ್‌ ಬುವ್ರಾ ಮತ್ತು ಜಹೀರ್‌ ಖಾನ್‌ ಇದ್ದಾರೆ.

RELATED ARTICLES

Latest News