Wednesday, December 4, 2024
Homeರಾಜ್ಯಎರಡು ಬ್ಯಾಂಕ್‍ಗಳಲ್ಲಿ ಒಂದೇ ಆಸ್ತಿಪತ್ರ ಅಡಮಾನವಿಟ್ಟು ಸಾಲ ಪಡೆದ ಚಾಲಾಕಿ ದಂಪತಿ

ಎರಡು ಬ್ಯಾಂಕ್‍ಗಳಲ್ಲಿ ಒಂದೇ ಆಸ್ತಿಪತ್ರ ಅಡಮಾನವಿಟ್ಟು ಸಾಲ ಪಡೆದ ಚಾಲಾಕಿ ದಂಪತಿ

ಮೈಸೂರು, ಮಾ. 18- ಒಂದೇ ಆಸ್ತಿಯನ್ನು ಎರಡು ಬ್ಯಾಂಕ್ ಗಳಲ್ಲಿ ಅಡಮಾನವಿಟ್ಟ ಚಾಲಾಕಿ ದಂಪತಿ ವಿರುದ್ಧ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಸರಸ್ವತಿಪುರಂ ಬ್ರಾಂಚ್ ನಲ್ಲಿ 49.99 ಲಕ್ಷ ಸಾಲ ಪಡೆದು ಅದೇ ದಾಖಲಾತಿಯನ್ನ ತಿದ್ದುಪಡಿ ಮಾಡಿ ಬೆಂಗಳೂರಿನ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಾಲ ಪಡೆದು ವಂಚಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಮೈಸೂರಿನ ಜೆಪಿ ನಗರ ನಿವಾಸಿಗಳಾದ ನಿರಂಜನ್ ಹಾಗೂ ನಂದಿನಿ ದಂಪತಿ ವಿರುದ್ದ ಚೀಟಿಂಗ್ ಪ್ರಕರಣ ದಾಖಲಾಗಿದೆ. ನಿರಂಜನ್ ಹಾಗೂ ನಂದಿನಿ ರವರಿಗೆ ಸೇರಿದ ಆಸ್ತಿಯ ಮೂಲ ದಾಖಲಾತಿಗಳನ್ನ ಸರಸ್ವತಿಪುರಂ ಬ್ರಾಂಚ್ ನ ಬ್ಯಾಂಕ್ ಆಫ್ ಬರೋಡದಲ್ಲಿ ಅಡಮಾನವಿಟ್ಟು 2016 ರಲ್ಲಿ 49.99 ಲಕ್ಷ ಸಾಲ ಪಡೆದಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಶುರುವಾದ ನಕ್ಸಲ್ ಚಟುವಟಿಕೆ

ಸಾಲ ಪಡೆದು 8 ವರ್ಷಗಳಾದರೂ ಹಣ ಮರುಪಾವತಿಸಿಲ್ಲ. ಸಾಲದ ಹಣ ಬಡ್ಡಿ ಸೇರಿ 79,71,306 ರೂ. ಪಾವತಿಸಬೇಕಿರುತ್ತದೆ. ಈ ಮಧ್ಯೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಸುರಭಿ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಹ ಇದೇ ದಾಖಲಾತಿಗಳನ್ನ ತಿದ್ದುಪಡಿ ಮಾಡಿ ಸಾಲ ಪಡೆದಿರುವುದು ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರ ಗಮನಕ್ಕೆ ಬಂದಿದೆ. ಅಲ್ಲದೆ ಈ ಬಗ್ಗೆ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನವರೂ ಸಹ ಪತ್ರ ವ್ಯವಹಾರ ಮಾಡಿ ದಂಪತಿಯ ವಂಚನೆ ಬಯಲಿಗೆ ತಂದಿದ್ದಾರೆ.

ಈ ಸಂಬಂಧ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಎಂ.ಯೋಗೇಶ್ ರವರು ದಂಪತಿ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News