Thursday, January 30, 2025
Homeಬೆಂಗಳೂರುಬಿಬಿಎಂಪಿ ನೌಕರನಿಂದ ಐಎಎಸ್ ಅಧಿಕಾರಿಗಳ ನಕಲಿ ಸಹಿ..!

ಬಿಬಿಎಂಪಿ ನೌಕರನಿಂದ ಐಎಎಸ್ ಅಧಿಕಾರಿಗಳ ನಕಲಿ ಸಹಿ..!

BBMP employee forges signatures of IAS officers..!

ಬೆಂಗಳೂರು,ಜ.29- ಬಿಬಿಎಂಪಿಯಲ್ಲಿ ಕೆಲಸ ಮಾಡಿಕೊಂಡೇ ಐಎಎಸ್ ಅಧಿಕಾರಿಗಳ ನಕಲಿ ಸಹಿ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವಾರ್ಡ್ನ ಕಿರಿಯ ಆರೋಗ್ಯ ಪರಿವೀಕ್ಷಕ ಕೃಷ್ಣ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಕೃಷ್ಣ ಎಂಬಾತ ಪಶ್ಚಿಮ ವಲಯದ ಐಎಎಸ್ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ವಂಚನೆ ಮಾಡುತ್ತ, ಕೋಟ್ಯಾಂತರ ರೂಪಾಯಿ ಅಕ್ರಮಗಳನ್ನು ನಡೆಸಿರುವುದರ ಜೊತೆಗೆ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಪೌರಕಾರ್ಮಿಕನಾಗಿದ್ದ ಕೃಷ್ಣ ಬಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ವಾರ್ಡ್ನಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕ ಹ್ದುೆಯನ್ನು ಕಾನೂನು ಬಾಹಿರವಾಗಿ ಹೊಂದಿರುವ ಆತ , ಅದೇ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ಮತ್ತು ಕಾಟನ್ ಪೇಟೆ ವಾರ್ಡ್ಗಳಲ್ಲೂ ಪ್ರಭಾರಿ ಕಿರಿಯ ಆರೋಗ್ಯ ಪರಿವೀಕ್ಷಕನಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾನೆ.

2022ರ ಸಾಲಿನಲ್ಲಿ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿಗಳಷ್ಟು ಹಣವನ್ನು ಲಂಚವನ್ನಾಗಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೋಲೀಸರಿಗೆ ಸಿಕ್ಕಿಬಿದ್ದು ಜೈಲು ಪಾಲಾಗಿ ಬಿಡುಗಡೆಯಾದ ನಂತರವೂ ಸಹ ಆತನನ್ನು ಅದೇ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅದೇ ವಾರ್ಡ್ ಗಳ ಕಿರಿಯ ಆರೋಗ್ಯ ಪರಿವೀಕ್ಷಕನ ಹುದ್ದೆಯಲ್ಲಿ ನಿಯೋಜನೆ ಮಾಡಿರುವುದೂ ಸಹ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಬಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೌಕರನಾಗಿದ್ದುಕೊಂಡು ತನ್ನ ಧರ್ಮಪತ್ನಿಯ ಹೆಸರಿನಲ್ಲೇ ತ್ಯಾಜ್ಯ ಸಂಗ್ರಹಣಾ ಕೆಲಸಕ್ಕೆ ಕಾರ್ಯಾದೇಶ ಪತ್ರವನ್ನು ಪಡೆದಿರುವುದೂ ಸಹ ಕಾನೂನು ಬಾಹಿರ ಕಾರ್ಯವಾಗಿರುತ್ತದೆ.

ಈತ ಸ್ಥಳೀಯ ಶಾಸ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಧರ್ಮಪತ್ನಿ ಹೆಸರನ್ನು ಹೇಳಿಕೊಂಡು ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಎನ್ನದೇ ಎಲ್ಲ ಅಧಿಕಾರಿಗಳು ಮತ್ತು ನೌಕರರನ್ನು ಬ್ಲಾಕ್ ಮೇಲ್ ಮಾಡುತ್ತಾ, ಅಪಾರ ಪ್ರಮಾಣದ ವಂಚನೆಯನ್ನು ಮತ್ತು ಭ್ರಷ್ಟಾಚಾರವನ್ನು ಮಾಡುತ್ತಿರುತ್ತಾನೆ ಎಂದು ಅವರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಅಲ್ಲದೇ, ಈತ ಪಶ್ಚಿಮ ವಲಯದ ಅಧೀಕ್ಷಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಘನತ್ಯಾಜ್ಯ ನಿರ್ವಹಣೆ) ಗಳ ಸಹಿಗಳನ್ನು ಈತನೇ ಮಾಡಿರುತ್ತಾನೆ. ಹಾಗೆಯೇ ಈ ಹಿಂದೆ ಪಶ್ಚಿಮ ವಲಯದ ವಲಯ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ದೀಪಕ್ ಅವರ ಸಹಿಯನ್ನು ಹಾಗೂ ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಪಾಲಿಕೆಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರ ಸಹಿಯನ್ನೂ ಸಹ ಈತನೇ ನಕಲು ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿಸಿಕೊಂಡಿರುತ್ತಾನೆ.

ಕಾನೂನು ರೀತ್ಯಾ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಹೊರತುಪಡಿಸಿ ಮಧ್ಯಾಹ್ನದ ಮತ್ತು ರಾತ್ರಿಯ ಪಾಳಿಗಳಲ್ಲಿಯೂ ಸಹ ತ್ಯಾಜ್ಯ ಸಂಗ್ರಹಣೆ ಕಾರ್ಯಕ್ಕೆಂದು ವಾಹನಗಳನ್ನು ಬಳಸುತ್ತಿರುವ ಬಗ್ಗೆ ದಾಖಲೆಗಳನ್ನು ಸಷ್ಟಿಸಿ ಪ್ರತೀ ತಿಂಗಳು ಹತ್ತಾರು ಲಕ್ಷ ರೂಪಾಯಿಗಳಷ್ಟು ಹಣವನ್ನು ದೋಚುತ್ತಿರುವ ಆಘಾತಕಾರಿ ಸಂಗತಿ ಕೇವಲ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿದ್ದು, ಇವುಗಳ ಮೂಲ ಕಾರಣಕರ್ತನೇ ಈ ಕಷ್ಣ ಹೀಗಾಗಿ ಆತ ಕೆಲಸಕ್ಕೆ ಸೇರಿದ್ದು ಹೇಗೆ ಮತ್ತು ಅವನ ಕರ್ಮಕಾಂಡಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.

RELATED ARTICLES

Latest News