ಬೆಂಗಳೂರು, ಫೆ.26- ಕನ್ನಡ ನಾಮಫಲಕ ಅಳವಡಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ.
ನಗರದಲ್ಲಿ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಹಾಗೂ ಫೆ. ಅಂತ್ಯದೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಬಿಬಿಎಂಪಿ ಡೆಡ್‍ಲೈನ್ ನೀಡಿತ್ತು.
ನಗರದಲ್ಲಿರುವ ಬಹುತೇಕ ಅಂಗಡಿಗಳ ನಾಮಫಲಕ ಇನ್ನೂ ಅನ್ಯ ಭಾಷೆಯ ನಾಮಫಲಕಗಳಿರುವುದು ಕಂಡು ಬಂದಿದ್ದು, ತಿಂಗಳಾಂತ್ಯದೊಳಗೆ ಕನ್ನಡಿಕರಣಗೊಳಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪಾಲಿಕೆಯಿಂದ 50.216 ಮಳಿಗೆಗಳಿಗೆ ನೋಟೀಸ್ ನೀಡಲಾಗಿದೆ.. ಈ ಪೈಕಿ ಈಗಾಗಲೇ 46,600 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಂಡಿದ್ದಾರೆ. ಇನ್ನೂ 3,616 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಕೆ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರುದ್ಯೋಗ ತಗ್ಗಿಸಲು ಪ್ರತಿ ವರ್ಷ ಬೃಹತ ಉದ್ಯೋಗ ಮೇಳ : ಸಿಎಂ ಸಿದ್ದರಾಮಯ್ಯ
ಕನ್ನಡ ನಾಮಫಲಕ ವಲಯವಾರು ನೋಟಿಸ್ ವಿವರ ಈ ರೀತಿ ಇದೆ:
ಬೆಂಗಳೂರು ದಕ್ಷಿಣ ವಲಯ
ನೋಟೀಸ್ ಸಂಖ್ಯೆ- 5982.
ನಾಮಫಲಕ ಬದಲಾವಣೆ – 5605.
ನಾಮಫಲಕ ಬದಲಾವಣೆ ಬಾಕಿ – 377.
ಬೆಂಗಳೂರು ಪೂರ್ವ ವಲಯ
ನೋಟೀಸ್ ಸಂಖ್ಯೆ- 8634.
ನಾಮಫಲಕ ಬದಲಾವಣೆ – 8634.
ನಾಮಫಲಕ ಬದಲಾವಣೆ ಬಾಕಿ – 0000
ಬೊಮ್ಮನಹಳ್ಳಿ
ನೋಟೀಸ್ ಸಂಖ್ಯೆ- 8413.
ನಾಮಫಲಕ ಬದಲಾವಣೆ – 7730.
ನಾಮಫಲಕ ಬದಲಾವಣೆ ಬಾಕಿ -693.
ಮಹದೇವಪುರ
ನೋಟೀಸ್ ಸಂಖ್ಯೆ- 5960.
ನಾಮಫಲಕ ಬದಲಾವಣೆ – 5730.
ನಾಮಫಲಕ ಬದಲಾವಣೆ ಬಾಕಿ – 230.
ಪಶ್ಚಿಮ ವಲಯ
ನೋಟೀಸ್ ಸಂಖ್ಯೆ- 7113.
ನಾಮಫಲಕ ಬದಲಾವಣೆ – 6544.
ನಾಮಫಲಕ ಬದಲಾವಣೆ ಬಾಕಿ – 569.
ಯಲಹಂಕ ವಲಯ
ನೋಟೀಸ್ ಸಂಖ್ಯೆ- 6165.
ನಾಮಫಲಕ ಬದಲಾವಣೆ – 5405.
ನಾಮಫಲಕ ಬದಲಾವಣೆ ಬಾಕಿ-760.
ಅರ್ .ಅರ್ ನಗರ ವಲಯ
ನೋಟೀಸ್ ಸಂಖ್ಯೆ- 6401.
ನಾಮಫಲಕ ಬದಲಾವಣೆ – 5563.
ನಾಮಫಲಕ ಬಾಕಿ-838..
ದಾಸರಹಳ್ಳಿ ವಲಯ
ನೋಟೀಸ್ ಸಂಖ್ಯೆ – 1548.
ನಾಮಫಲಕ ಬದಲಾವಣೆ – 1399.
ನಾಮಫಲಕ ಬದಲಾವಣೆ ಬಾಕಿ – 149.
ಒಟ್ಟು 50,216 – 46,600 -3,616.
ಇದಿಷ್ಟು ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆವರಿಗೆ ಮಾತ್ರ ನೋಟಿಸ್ ಕೊಟ್ಟಿರೋದು..
ಉಳಿದ ಪರವಾನಗಿ ಪಡೆಯದ ವ್ಯಾಪಾರ ನಡೆಸಲಾಗುತ್ತಿರೋ ವಾಣಿಜ್ಯ ಮಳಿಗೆಗಳ ಮೇಲೆ ಅನ್ಯ ಭಾಷೆಯ ನಾಮಫಲಕ ಇಂದಿಗೂ ಇವೆ. ಅವುಗಳ ಮೇಲೆ ಕ್ರಮ ಕೈಗೋಳ್ತಿವಿ ಅಂತ ಪಾಲಿಕೆ ಅರೋಗ್ಯಧಿಕಾರಿ ಮಾಹಿತಿ ನೀಡಿದ್ದಾರೆ.