Friday, May 3, 2024
Homeಬೆಂಗಳೂರು471 ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಗುರಿ

471 ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಗುರಿ

ಬೆಂಗಳೂರು,ಫೆ.13- ತಪ್ಪು ಮಾಹಿತಿ ನೀಡಿರುವ ನಗರದ ಆಸ್ತಿ ಮಾಲಿಕರಿಂದ ದಂಡದ ಜೊತೆಗೆ ಆಸ್ತಿ ತೆರಿಗೆ ಸಂಗ್ರಹಿಸಲು ಮುಂದಾಗಿರುವ ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ ದಾಖಲೆಯ 471 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡುವ ಗುರಿ ಇರಿಸಿಕೊಂಡಿದೆ. ಬಿಜೆಪಿ ಮುಖಂಡರ ಆಕ್ರೋಶದ ನಡುವೆಯೂ ಬಾಕಿ ತೆರಿಗೆ ವಸೂಲಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿರುವ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ತೆರಿಗೆ ಸಂಗ್ರಹದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ.

ಹೊಸ ನೀತಿಯಂತೆ ಬಿಬಿಎಂಪಿ ಅಧಿಕಾರಿಗಳು ಇದುವರೆಗೆ ಆಸ್ತಿ ತೆರಿಗೆ ಪಾವತಿ ಹೆಸರಲ್ಲಿ ಇದುವರೆಗೂ 10 ಸಾವಿರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಬೀಗ ಜಡಿದಿರುವ ಅಂಶ ಇದೀಗ ಬಯಲಾಗಿದೆ. ನಗರದ ಎಂಟು ವಲಯಗಳಲ್ಲಿ ಯದ್ವಾತದ್ವಾ ಟ್ಯಾಕ್ಸ್ ಕಲೆಕ್ಷನ್ ಡ್ರೈವ್ ನಡೆಸಿರುವ ಪಾಲಿಕೆ ಅಧಿಕಾರಿಗಳು ಸರ್ಕಾರದ ಗ್ಯಾರಂಟಿ ಮೇಕ್ ಓವರ್ ಗೆ ಬಿಬಿಎಂಪಿಯಿಂದ ಖಜಾನೆ ಭರ್ತಿಗೆ ಹರ ಸಾಹಸ ನಡೆಸುತ್ತಿರುವುದು ಕಂಡು ಬರುತ್ತಿದೆ.

ಇದುವರೆಗೂ 14,724 ಆಸ್ತಿ ಮಾಲೀಕರು ದಾಖಲೆಗಳು ಸರಿಯಿಲ್ಲ ಎಂಬ ಕಾರಣ ದಂಡ ಹಾಕಿಸಿಕೊಂಡಿದ್ದರೆ, ದಾಖಲೆ ಎಲ್ಲಾ ಸರಿಯಿದ್ದು ಆಸ್ತಿ ತೆರಿಗೆ ಕಟ್ಟದೆ ಕಳ್ಳಾಟವಾಡಿದ 47,664 ಆಸ್ತಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ತೆರಿಗೆ ಕಟ್ಟದ ಕಾರಣ ಪಾಲಿಕೆಯಿಂದ ಬೀಗ ಜಡಿಸಿಕೊಂಡ ವಾಣಿಜ್ಯ ಕಟ್ಟಡಗಳ ಸಂಖ್ಯೆ 10,533 ಆಗಿದ್ದು, ಈ ಎಲ್ಲಾ ಪ್ರಕರಣಗಳಿಂದ ಪಾಲಿಕೆ ಒಟ್ಟು 471 ಕೋಟಿ ತೆರಿಗೆ ಸಂಗ್ರಹ ನಿರೀಕ್ಷೆ ಇರಿಸಿಕೊಂಡಿದೆ.

ವಲಯವಾರು ಆಸ್ತಿ ತೆರಿಗೆ ಸಂಗ್ರಹ ಎಷ್ಟು.!?
(ವಲಯ : ದಾಖಲೆ ತಪ್ಪು ಆಸ್ತಿ : ತೆರಿಗೆ ಕಟ್ಟದವರು : ಬೀಗ ಹಾಕಿದ ಆಸ್ತಿ : ಒಟ್ಟು ತೆರಿಗೆ ಸಂಗ್ರಹ)
ಬೊಮ್ಮನಹಳ್ಳಿ : 2,081 : 3,924 : 936 : 50.06 ಕೋಟಿ
ದಾಸರಹಳ್ಳಿ : 1,072 : 1,804 : 462 : 27.52 ಕೋಟಿ
ಪೂರ್ವ ವಲಯ : 2,376 : 7,876 : 2,484 : 80.44 ಕೋಟಿ
ಮಹಾದೇಪುರ : 1,484 : 4,558 : 1,319 : 70.66 ಕೋಟಿ
ಆರ್ ಆರ್ ನಗರ : 1,521 : 3,495 : 1,199 : 62.22 ಕೋಟಿ
ದಕ್ಷಿಣ ವಲಯ : 1,940 : 9,369 : 1,687 : 47.69 ಕೋಟಿ
ಪಶ್ಚಿಮ ವಲಯ : 3,357 : 11,796 : 1,764 : 103.13 ಕೋಟಿ
ಯಲಹಂಕ : 893 : 4,842 : 682 : 30.21 ಕೋಟಿ
ಒಟ್ಟು : 14,724 : 47,664 : 10,533 : 471.93 ಕೋಟಿ ರೂ.ಗಳಾಗಿದೆ.

RELATED ARTICLES

Latest News