Thursday, February 22, 2024
Homeಬೆಂಗಳೂರುತೆರಿಗೆ ಭಾರ ಇಳಿಸಿದ ಬಿಬಿಎಂಪಿ : ಬೆಂಗಳೂರಿಗರಿಗೆ ಕೊಂಚ ರಿಲೀಫ್

ತೆರಿಗೆ ಭಾರ ಇಳಿಸಿದ ಬಿಬಿಎಂಪಿ : ಬೆಂಗಳೂರಿಗರಿಗೆ ಕೊಂಚ ರಿಲೀಫ್

ಬೆಂಗಳೂರು,ಫೆ.9- ಏಕಾಏಕಿ ನಗರದ ನಾಗರೀಕರಿಗೆ ತೆರಿಗೆ ಭಾರ ಹೊರಿಸಿದ್ದ ಬಿಬಿಎಂಪಿ ಆಸ್ತಿ ತೆರಿಗೆದಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಿದೆ. ದುಪ್ಪಟ್ಟು ಆಸ್ತಿ ತೆರಿಗೆ ಪಾವತಿಸುವ ಬದಲು ಬಡ್ಡಿ ಕಟ್ಟುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸ್ವಯಂ ಫೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಣೆ ಮಾಡಿಕೊಂಡಿರುವ ಕೆಲವರು ತಪ್ಪು ಅಳತೆ ಆಧಾರದ ಮೇಲೆ ತೆರಿಗೆ ಪಾವತಿಸುತ್ತಿರುವುದನ್ನು ಪತ್ತೆ ಹಚ್ಚಿದ್ದ ಬಿಬಿಎಂಪಿ ಅಧಿಕಾರಿಗಳು ಆಸ್ತಿ ಮಾಲೀಕರಿಗೆ ದುಪ್ಪಟ್ಟು ತೆರಿಗೆ ಕಟ್ಟುವಂತೆ ನೋಟೀಸ್ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳ ಈ ದಿಢೀರ್ ನಿರ್ಧಾರದಿಂದ ನಗರದ 78 ಸಾವಿರ ಆಸ್ತಿಗೆ ತೆರಿಗೆದಾರರಿಗೆ ಸಂಕಷ್ಟ ಎದುರಾಗಿತ್ತು.

ರಾಷ್ಟ್ರೀಯ ಲೋಕದಳ ಹೊರಕ್ಕೆ, ಇಂಡಿಯಾ ಒಕ್ಕೂಟ ಛಿದ್ರ

ಬಿಬಿಎಂಪಿ ಅಧಿಕಾರಿಗಳ ಈ ಏಕಾಏಕಿ ನಿರ್ಧಾರದಿಂದ ಜನ ರೊಚ್ಚಿಗೆದ್ದಿದ್ದರು ಮಾತ್ರವಲ್ಲ ಸರ್ಕಾರದವರಿಗೆ ಹಿಡಿಶಾಪ ಹಾಕುತ್ತಿದ್ದರೂ ಜನರ ಆಕ್ರೋಶವನ್ನು ಆರ್ಥ ಮಾಡಿಕೊಂಡಿರುವ ಬಿಬಿಎಂಪಿಯವರು ಇದೀಗ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಬ್ಯಾಂಕ್ ಬಡ್ಡಿ ದರ ಕಟ್ಟಲು ಸೂಚನೆ ನೀಡಿದೆ.

ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಯಲಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆಸ್ತಿ ಮಾಲೀಕರು ತಪ್ಪು ಮಾಡಿದ್ದಾರೆ. ಈ ತಪ್ಪನ್ನು ಬಿಬಿಎಂಪಿ ಸರಿಯಾದ ಸಮಯಕ್ಕೆ ಮಾಲೀಕರಿಗೆ ತಿಳಿಸಿಲ್ಲ ಹೀಗಾಗಿ ತೆರಿಗೆದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಹಣವನ್ನು ಸಂಗ್ರಹಿಸುವಂತಿಲ್ಲ. ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬ್ಯಾಂಕ್ ಬಡ್ಡಿ ದರವನ್ನು ವಿಸಬಹುದು ಎಂದು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

2016-17 ನೇ ಸಾಲಿನಿಂದ ತಪ್ಪು ವರ್ಗೀಕಣದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದರೆ. ದುಪ್ಪಟ್ಟು ದಂಡದ ಬದಲು ಬ್ಯಾಂಕ್ ಬಡ್ಡಿ ದರ ಕಟ್ಟಲು ಸೂಚನೆ ನೀಡಿರುವುದರಿಂದ ಲಕ್ಷ ಲಕ್ಷಗಳಲ್ಲಿ ತೆರಿಗೆ ಪಾವತಿಸಬೇಕಿದ್ದ ನಾಗರೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES

Latest News