Friday, November 22, 2024
Homeಬೆಂಗಳೂರುಮತ್ತೆ ಮಂತ್ರಿ ಮಾಲ್‍ಗೆ ಬಿತ್ತು ಬೀಗ

ಮತ್ತೆ ಮಂತ್ರಿ ಮಾಲ್‍ಗೆ ಬಿತ್ತು ಬೀಗ

ಬೆಂಗಳೂರು,ಮಾ.16- ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬೀಗ ಜಡಿಯಲಾಗಿದೆ.ಬಾಕಿ ಇರುವ ಕೋಟಿ ಕೋಟಿ ಆಸ್ತಿ ತೆರಿಗೆ ಪಾವತಿಸಲು ಮೀನಾಮೇಷ ಎಣಿಸುತ್ತಿದ್ದ ಮಾಲ್‍ಗೆ ಇಂದು ಮುಂಜಾನೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.ಈ ಹಿಂದೆಯೂ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು ಆದರೂ 51 ಕೋಟಿವರೆಗೂ ತೆರಿಗೆ ಪಾವತಿ ಉಳಿಸಿಕೊಂಡಿದ್ದ ಮಂತ್ರಿಮಾಲ್ ಮಾಲೀಕರಿಗೆ ತೆರಿಗೆ ಪಾವತಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಳ್ಳಂ ಬೆಳಗ್ಗೆ ಮಾರ್ಷಲ್‍ಗಳು ಹಾಗೂ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಮಾಲ್ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಜಡಿದರು. ಸದ್ಯ ಸುಮಾರು 32 ಕೋಟಿ ರೂಪಾಯಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದ ಮಾಲ್‍ನವರಿಗೆ ಒನ್ ಟೈಮ್ ಪೇಮೆಂಟ್ ಗೆ ಅವಕಾಶ ಕೊಡಲಾಗಿತ್ತು. ಆದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮತ್ತೆ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿದೆ.

ಮಾಲ್ ಸಿಬ್ಬಂದಿಗಳನ್ನು ಒಳಗೆ ಹೋಗಲು ಪೊಲೀಸರು ಹಾಗೂ ಮಾರ್ಷಲ್‍ಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಎದಿರು ಭಾರಿ ಜನ ಸಮೂಹ ಕಂಡುಬಂತು.ಈ ಬಾರಿ ಬಾಕಿ ಉಳಿಸಿಕೊಂಡಿರುವ ಪೂರ್ತಿ ತೆರಿಗೆ ಪಾವತಿ ಮಾಡುವವರೆಗೂ ಓಪನ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೆನರಾ ಬ್ಯಾಂಕ್ ನಲ್ಲಿ ನೂರಾರು ಕೋಟಿ ಸಾಲ ಪಡೆದಿರುವ ಮಂತ್ರಿ ಗ್ರೂಪ್‍ನವರಿಗೆ ಬರುವ ಮಾಲ್ ಆದಾಯ ಪೂರ್ತಿ ನೇರವಾಗಿ ಸಾಲ ಪಾವತಿಗೆ ಹೋಗುತ್ತಿರುವುದರಿಂದ ಮಾಲ್‍ನವರು ಆರ್ಥಿಕವಾಗಿ ದಿವಾಳಿಯಾಗಿ ಹೋಗಿದ್ದಾರೆ. ಹೀಗಾಗಿ ಕೆನರಾ ಬ್ಯಾಂಕ್‍ನವರೇ ಮಾಲ್ ತೆರಿಗೆ ಪಾವತಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

RELATED ARTICLES

Latest News