Thursday, December 12, 2024
Homeಬೆಂಗಳೂರುಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷಕ್ಕೆ ಮತ್ತೊಂದು ಬಲಿ, ಪಾರ್ಕ್‌ನಲ್ಲಿ ಮರ ಬಿದ್ದು ಚಾಲಕ ಸಾವು

ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷಕ್ಕೆ ಮತ್ತೊಂದು ಬಲಿ, ಪಾರ್ಕ್‌ನಲ್ಲಿ ಮರ ಬಿದ್ದು ಚಾಲಕ ಸಾವು

BBMP staff negligence, driver dies after tree falls in park

ಬೆಂಗಳೂರು,ನ.25- ಬಿಬಿಎಂಪಿ ಸಿಬ್ಬಂದಿಗಳ ಬೇಜವಬ್ದಾರಿತನಕ್ಕೆ ಮತ್ತೊಂದು ಜೀವ ಬಲಿ ಯಾಗಿದೆ. ಉದ್ಯಾನವನಗಳಲ್ಲಿನ ಒಣ ಮರಗಳನ್ನು ತೆರವುಗೊಳಿಸದ ಕಾರಣ ಪಾರ್ಕ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ರೊಬ್ಬರು ಮೃತಪಟ್ಟಿದ್ದಾರೆ.

ಅವಘಡದಲ್ಲಿ ಮೃತ ಪಟ್ಟ ವ್ಯಕ್ತಿಯನ್ನು ಬಿಬಿಎಂಪಿ ಕಸದ ಲಾರಿ ಚಾಲಕ ಲಕ್ಷ್ಮಣ್ ಎಂದು ಗುರುತಿಸಲಾಗಿದೆ.ರಾಜಾಜಿನಗರದ ನವರಂಗ್ ಚಿತ್ರಮಂದಿರ ಸಮೀಪ ಇರುವ ಪಾರ್ಕ್ನಲ್ಲಿ ಲಕ್ಷ್ಮಣ್ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಪಾರ್ಕ್ನಲ್ಲಿ ಒಣಗಿದ್ದ ಮರದ ಬೃಹತ್ ಕೊಂಬೆಯೊಂದು ದಿಢೀರ್ ಅವರ ಮೇಲ ಬಿತ್ತು.

ಮರ ಬಿದ್ದ ರಭಸದಿಂದ ಎದೆಗೆ ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರಾಜಾಜಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಪಾಲಿಕೆ ಸಿಬ್ಬಂದಿಗಳು ಪಾರ್ಕ್ಗಳಲ್ಲಿನ ಮರಗಳ ನಿರ್ವಹಣೆ ಮಾಡದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News