Tuesday, August 19, 2025
Homeಬೆಂಗಳೂರುಬೀದಿ ನಾಯಿಗಳಿಗೆ ಬಿಬಿಎಂಪಿಯಿಂದ ಟ್ರೈನಿಂಗ್‌..!

ಬೀದಿ ನಾಯಿಗಳಿಗೆ ಬಿಬಿಎಂಪಿಯಿಂದ ಟ್ರೈನಿಂಗ್‌..!

BBMP to train stray dogs..!

ಬೆಂಗಳೂರು, ಆ.19- ಬೀದಿ ನಾಯಿಗಳಿಗೆ ಬಾಡೂಟ ಹಾಕುವುದಾಗಿ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಬಿಎಂಪಿ ಇದೀಗ ಡಾಗ್‌ ಟ್ರೈನಿಂಗ್‌ನಂತಹ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದೆ.

ರಾಜಧಾನಿಯ ಬೀದಿನಾಯಿಗಳನ್ನ ನಿಯಂತ್ರಣ ಮಾಡೋಕೆ ಟ್ರೈನರ್‌ಗಳನ್ನು ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ಪೊಲೀಸ್‌‍ ನಾಯಿಗಳಿಗೆ ತರಬೇತಿ ನೀಡುತ್ತಿದ್ದ ಟ್ರೈನರ್‌ಗಳ ಮೂಲಕ ಬೀದಿನಾಯಿಗಳನ್ನ ನಿಯಂತ್ರಣ ಮಾಡೋಕೆ ಬಿಬಿಎಂಪಿ ಹೊಸ ಪ್ಲಾನ್‌ ಹಾಕಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೌಬೌ ಗ್ಯಾಂಗ್‌ಗಳ ದಾಳಿಗೆ ಮುಕ್ತಿ ಹಾಡಲು ಹಾಗೂ ಬೀದಿ ನಾಯಿಗಳ ಕಾಟಕ್ಕೆ ಬ್ರೇಕ್‌ ಹಾಕುವ ಉದ್ದೇಶದಿಂದಲೇ ಈ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗಿದೆಯಂತೆ.ಬೀದಿ ನಾಯಿಗಳ ಉಪಟಳ ತಪ್ಪಿಸಿ ಎಂದರೆ ಅದೇ ರಾಗ ಅದೇ ಹಾಡು ಎಂಬಂತೆ ಬಿಬಿಎಂಪಿಯವರು ದಾಳಿ ಮಾಡುವ ನಾಯಿಗಳನ್ನು ಪತ್ತೆ ಹಚ್ಚಿ ಟ್ರೈನಿಂಗ್‌ ನೀಡುತ್ತೇವೆ ಎನ್ನುತ್ತಿರುವುದು ಮಾತ್ರ ಹಾಸ್ಯಸ್ಪದವಾಗಿದೆ.ಬಿಬಿಎಂಪಿ ಅಧಿಕಾರಿಗಳ ನಡೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News