Thursday, December 5, 2024
Homeರಾಜ್ಯನಕಲಿ ಕರೆಗಳು-ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ : ಅನುಚೇತ್

ನಕಲಿ ಕರೆಗಳು-ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ : ಅನುಚೇತ್

Be careful of fake calls-links: Anucheth

ಬೆಂಗಳೂರು,ನ.21– ನಗರ ಸಂಚಾರಿ ಪೊಲೀಸರೆಂದು ಹೇಳಿಕೊಳ್ಳುವ ನಕಲಿ ಕರೆಗಳು ಮತ್ತು ದುರದ್ದೇಶಪೂರಿತ ಲಿಂಕ್ಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಿ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಸಲಹೆ ನೀಡಿದ್ದಾರೆ.

ಇಂತಹ ಕರೆಗಳು ಮತ್ತು ಸಂದೇಶಗಳು ನಾಗರಿಕರನ್ನು ಮೋಸಗೊಳಿಸಲು ಮತ್ತು ವೈಯಕ್ತಿಕ ಮಾಹಿತಿ ಇಲ್ಲವೇ ಹಣವನ್ನು ದೋಚಲು ವಾಮಮಾರ್ಗದಲ್ಲಿ ಪ್ರಯತ್ನಿಸುತ್ತಿವೆ. ದಂಡವನ್ನು ಪಾವತಿಸುವಂತೆ ಕೋರಿ ಸಂಚಾರ ಪೊಲೀಸ್ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಿ, ಸಂಚಾರಿ ನಿಯಮ ಉಲ್ಲಂಘನೆಗಳ ತುಣುಕನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಮತ್ತು ಪಾವತಿಗೆ ಒತ್ತಾಯಿಸುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಅವರು ತಿಳಿಸಿದ್ದಾರೆ.

ನಕಲಿ ವಿಮೆ ಅಥವಾ ನೋಂದಣಿ ಸೇವೆಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಕರೆಗಳು, ದುರದ್ದೇಶಪೂರಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಲು ಅಥವಾ ಲಗತ್ತುಗಳನ್ನು ಡೌನ್ಲೋಡ್ ಮಾಡಲು ನಾಗರಿಕರನ್ನು ಕೇಳುವ ಸಂದೇಶಗಳು, ನಿಮ ವಾಹನವನ್ನು ಹಿಟ್ ರನ್ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಸಂಚಾರಿ ಪೊಲೀಸರ ಹೆಸರಿನಲ್ಲಿ ಕರೆ ಮಾಡುವವರ ಬಗ್ಗೆ ನಿಗಾವಹಿಸಿ ಎಂದು ಸಲಹೆ ನೀಡಿದ್ದಾರೆ.

ವಂಚಕನು ನಿಮ ಗುರುತನ್ನು ಪರಿಶೀಲಿಸಲು ನಿಮ ಕರೆಯನ್ನು ಪೊಲೀಸ್(ನಕಲಿ) ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿಕೊಳ್ಳುವ ಅಥವಾ ಪಾವತಿಯನ್ನು ದೃಢೀಕರಿಸಲು ನಿಮ ಫೋನ್ನಿಂದ 1, 2 ಹೀಗೆ ಸಂಖ್ಯೆಗಳನ್ನು ಒತ್ತಲು ಕೇಳುವ ಕರೆಗಳನ್ನು ನಿರ್ಲಕ್ಷಿಸಿ ಎಂದು ಅವರು ಸೂಚಿಸಿದ್ದಾರೆ.

ನಾಗರಿಕರಿಗೆ ಸಲಹೆ:
ಒಂದು ವೇಳೆ ಅಂತಹ ಕರೆಗಳು ಅಥವಾ ಸಂದೇಶಗಳು ಬಂದರೆ ಪ್ರತಿಕ್ರಿಯಿಸಬೇಡಿ, ಅನುಮಾನಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಲಗತ್ತುಗಳನ್ನು ಡೌನ್ಲೋಡ್ ಮಾಡಬೇಡಿ, ವೈಯಕ್ತಿಕ ಮಾಹಿತಿ ಒದಗಿಸಬೇಡಿ, ಹಣ ಪಾವತಿ ಮಾಡಬೇಡಿ. ನಮ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸರ್ಹತೆಯನ್ನು ಪರಿಶೀಲಿಸಿ.

ಸುರಕ್ಷತಾ ಮುನ್ನೆಚ್ಚರಿಕೆಗಳು:
ಮಾಹಿತಿಯನ್ನು ಒದಗಿಸುವ ಮೊದಲು ಅಧಿಕಾರಿಗಳ ಗುರುತು ಪರಿಶೀಲಿಸಿ. ನಮ ಅಧಿಕೃತ ವೆಬ್ಸೈಟ್ ಅಥವಾ ಸಹವಾಣಿ(080-22868550/22868444)ಗೆ ದೂರುಗಳನ್ನು ದಾಖಲಿಸಿ.

ಯಾವುದೇ ಅನುಮಾನಸ್ಪದ ಕರೆಗಳು ಅಥವಾ ಸಂದೇಶಗಳನ್ನು ನೀವು ಸ್ವೀಕರಿಸಿದರೆ ತಕ್ಷಣ ಇಮೇಲ್( acpplanningoffice@gmail.com)ಗೆ ವರದಿ ಮಾಡುವ ಮೂಲಕ ಸುರಕ್ಷಿತವಾಗಿರಿ, ಜಾಗರೂಕರಾಗಿರಿ ಎಂದು ಅನುಚೇತ್ ಅವರು ಸಲಹೆ ಮಾಡಿದ್ದಾರೆ.

RELATED ARTICLES

Latest News