Saturday, November 22, 2025
Homeಬೆಂಗಳೂರುಬೆಂಗಳೂರು : ಕದಂಬ ಹೋಟೆಲ್‍ಗೆ ಹುಸಿ ಬಾಂಬ್ ಬೆದರಿಕೆ

ಬೆಂಗಳೂರು : ಕದಂಬ ಹೋಟೆಲ್‍ಗೆ ಹುಸಿ ಬಾಂಬ್ ಬೆದರಿಕೆ

ಬೆಂಗಳೂರು, ಏ.22– ಜಾಲಹಳ್ಳಿ ಸಮೀಪದ ಹೋಟೆಲ್ ಒಂದಕ್ಕೆ ಬಾಂಬ್ ಇಟ್ಟಿರುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಜಾಲಹಳ್ಳಿ ವೃತ್ತ ಬಳಿ ಇರುವ ಕದಂಬ ಗಾರ್ಡೇನಿಯಾ ಹೋಟೆಲ್ಗೆ ಇಂದು ಬೆಳಗ್ಗೆ ಅನಾಮಾಧೇಯ ಪತ್ರವೊಂದು ಬಂದಿದ್ದು, ಮಧ್ಯಾಹ್ನ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದೆ.

ಆಂಗ್ಲ ಭಾಷೆಯಲ್ಲಿದ್ದ ಪತ್ರವನ್ನು ನೋಡಿ ಕೂಡಲೇ ಹೋಟೆಲ್ನ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ.

ಹೋಟೆಲ್ ಬಂದಿದ್ದ ಗ್ರಾಹಕರು ಕೂಡ ಆತಂಕ ಗೊಂಡಿದ್ದು, ಆದರೆ ಇದು ದುಷ್ಕರ್ಮಿ ಕುಚೋದ್ಯ ಎಂದು ತಿಳಿದು ಬಂದು ನಿರಾಳರಾಗಿದ್ದಾರೆ. ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -

Latest News