Thursday, May 2, 2024
Homeಬೆಂಗಳೂರುಹಾಡಹಗಲೇ ಗುಂಡು ಹಾರಿಸಿ ಚಿನ್ನ ದರೋಡೆ

ಹಾಡಹಗಲೇ ಗುಂಡು ಹಾರಿಸಿ ಚಿನ್ನ ದರೋಡೆ

ಬೆಂಗಳೂರು,ಅ.12- ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಮಳಿಗೆಯೊಳಗೆ ಬಂದ ನಾಲ್ವರು ದರೋಡೆಕೋರರು ಮಾಲೀಕನಿಗೆ ಗುಂಡು ಹಾರಿಸಿ ಒಂದು ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಸಿನಿಮೀಯ ರೀತಿ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳ್ಳಂಬೆಳ್ಳಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿನಾಯಕ ಜ್ಯುವೆಲರ್ಸ್ ಮಾಲೀಕ ಮನೋಜ್ ಲೋಹರ್(30) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೋಜ್‍ಕುಮಾರ್ ಅವರು ದೊಡ್ಡ ಗೊಲ್ಲರಹಟ್ಟಿಯ ಪೈಪ್‍ಲೈನ್ ರಸ್ತೆಯಲ್ಲಿ ವಿನಾಯಕ ಜ್ಯುವೆಲರಿ ಮಳಿಗೆ ಇಟ್ಟುಕೊಂಡಿದ್ದು, ಇಂದು ಬೆಳಗ್ಗೆ ಎಂದಿನಂತೆ ಅಂಗಡಿ ತೆರೆದು ಕುಳಿತಿದ್ದರು.

ಮೊಬೈಲ್‌ನಲ್ಲಿ ಸೈರನ್ ಶಬ್ದ ಕೇಳಿ ಜನ ಶಾಕ್, ಕೇಂದ್ರ ಸರ್ಕಾರದಿಂದ ‘Emergency Alert’ ಪರೀಕ್ಷೆ

ಸುಮಾರು 10.45ರ ಸಮಯದಲ್ಲಿ ನಾಲ್ವರು ದರೋಡೆಕೋರರು ಎರಡು ಬೈಕ್‍ಗಳಲ್ಲಿ ಬಂದು ಇವರ ಅಂಗಡಿ ಮುಂದೆ ಬೈಕ್‍ಗಳನ್ನು ನಿಲ್ಲಿಸಿ ಆಭರಣ ಕೊಳ್ಳುವ ನೆಪದಲ್ಲಿ ಅಂಗಡಿಯೊಳಗೆ ಹೋಗಿ ರಿಂಗ್ ತೋರಿಸುವಂತೆ ಹೇಳಿದ್ದಾರೆ. ಮನೋಜ್ ಕುಮಾರ್ ಅವರು ಉಂಗುರ ತೋರಿಸುತ್ತಿದ್ದಂತೆ ಇಬ್ಬರು ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇನ್ನಿಬ್ಬರು ತಾವು ತಂದಿದ್ದ ಬ್ಯಾಗ್‍ಗಳಲ್ಲಿ ಮಳಿಗೆಯಲ್ಲಿದ್ದ ಸುಮಾರು 60 ಲಕ್ಷಕ್ಕೂ ಹೆಚ್ಚು ರೂ. ಮೌಲ್ಯದ ಒಂದು ಕೆಜಿಗೂ ಅಧಿಕ ಆಭರಣಗಳನ್ನೆಲ್ಲ ತುಂಬಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಮನೋಜ್‍ಕುಮಾರ್ ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ಅವರ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಆಭರಣಗಳಿದ್ದ ಬ್ಯಾಗಳೊಂದಿಗೆ ದರೋಡೆಕೋರರು ಬೈಕ್‍ಗಳಲ್ಲಿ ಪರಾರಿಯಾಗಿದ್ದಾರೆ.
ತಕ್ಷಣ ಮನೋಜ್‍ಕುಮಾರ್ ಮನೆಗೆ ಕರೆ ಮಾಡಿ ವಿಷಯ ತಿಳಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕೆ ಧಾವಿಸಿದ್ದಾರೆ. ಡಿಸಿಪಿ ಗಿರೀಶ್ ಅವರು ಸ್ಥಳಕ್ಕೆ ಬಂದು ಚಿನ್ನಾಭರಣ ಮಳಿಗೆಯನ್ನು ಪರಿಶೀಲಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಆಸ್ತಿ ಮುಟ್ಟುಗೋಲು

ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಎಫ್‍ಎಸ್‍ಎಲ್ ತಜ್ಞರ ತಂಡಗಳು ಪರಿಶೀಲನೆ ನಡೆಸಿವೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಯುವೆಲರಿ ಅಂಗಡಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡಹಗಲೇ ಗುಂಡು ಹಾರಿಸಿ ಚಿನ್ನಾಭರಣ ದೋಚಿರುವ ಬಗ್ಗೆ ಸುತ್ತಮುತ್ತಲಿನ ಅಂಗಡಿಯವರು ಆತಂಕಗೊಂಡಿದ್ದಾರೆ.

ವಿಶೇಷ ತಂಡ ರಚನೆ:
ಜ್ಯುವೆಲರಿ ಮಾಲೀಕನಿಗೆ ಗುಂಡು ಹಾರಿಸಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ದರೋಡೆಕೋರರ ಪತ್ತೆಗಾಗಿ ಡಿಸಿಪಿ ಗಿರೀಶ್ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.

RELATED ARTICLES

Latest News