Sunday, December 1, 2024
Homeಬೆಂಗಳೂರುಏ.23ಕ್ಕೆ ಬೆಂಗಳೂರು ಕರಗ, ನಾಳೆ ಉತ್ಸವಕ್ಕೆ ಚಾಲನೆ

ಏ.23ಕ್ಕೆ ಬೆಂಗಳೂರು ಕರಗ, ನಾಳೆ ಉತ್ಸವಕ್ಕೆ ಚಾಲನೆ

ಬೆಂಗಳೂರು,ಏ.14- ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ನಾಳೆಯಿಂದ ಚಾಲನೆ ದೊರೆಯಲಿದೆ. ನಾಳೆಯಿಂದ ಆರಂಭವಾಗುವ ಕರಗ ಉತ್ಸವದ ಆಚರಣೆಯನ್ನು ಈ ಬಾರಿ ವಿಜೃಂಬಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ನಾಳೆಯಿಂದ ಏ. 23 ರವರೆಗೆ ಬೆಂಗಳೂರು ಕರಗ ನಡೆಯಲ್ಲಿದ್ದು.ಇನ್ನೂ ಈ ಬಾರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ.

ಏಪ್ರಿಲ್ 23 ರ ಚೈತ್ರ ಮಾಸದ ಪೂರ್ಣಿಮೆಯಾಂದು ದ್ರೌಪದಿ ದೇವಿಯ ಹೂವಿನ ಕರಗ ಜರುಗಲಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ಹಾಗೂ ಸರ್ಕಾರದಿಂದ ಕರಗ ಉತ್ಸವಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗ್ತಿದೆ, ಕರಗ ವ್ಯವಸ್ಥಾಪನ ಸಮಿತಿಯಿಂದ ಪ್ರತಿಬಾರಿಯಂತೆ ಈ ಬಾರಿಯು ಪಕ್ಷಾತೀತವಾಗಿ ಉತ್ಸವ ನಡೆಯಲಿದೆ.

ಮಸ್ತಾನ್ ಸಾಭ್ ದರ್ಗಕ್ಕೆ ಕರಗ ಹೋಗೆ ಹೋಗುತ್ತೆ, ಮೊದಲಿನಿಂದಲು ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು

ಈ ಬಾರಿ ವೀರಕುಮಾರರಿಗೆ ಕೆಂಪು ವಸ್ತ್ರ. ಹಾಗೂ ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ಮುಂದಾಗಿದ್ದಿವಿ ಅಂತ ಸತೀಶ್ ಹೇಳಿದರು.ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌರ ಕಾಲದಿಂದಲು ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರ ರವರು 13 ನೇ ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಾಂತರ ಭಕ್ತಾಧಿಗಳು ಬರಲಿದ್ದಾರೆ.

ನಾಳೆ ಕರಗ ಉತ್ಸವದ ಮೊದಲ ದಿನ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡ್ತಿವಿ, ನಾಳೆಯಿಂದ 9 ದಿನಗಳವರೆಗೆ ಪ್ರತಿನಿತ್ಯ ಅಮ್ಮನಿಗೆ ವಿವಿಧ ಬಗ್ಗೆಯ ಪೂಜೆ ಮಾಡ್ತಿವಿ, ಏಪ್ರೀಲ್ 23 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ, ಇನ್ನೂ ಈ ಉತ್ಸವಕ್ಕೆ ರಾಜ್ಯದ ಗಣ್ಯರು ಸೇರಿದಂತೆ ಮಠಾಧೀಶರು ಅಗಮಿಸ್ತಾರೆ, ಈ ಬಾರಿ ಬಿಸಿಲಿನ ತಾಪಾಮಾನ ಹೆಚ್ಚಾಗಿರುವುದರಿಂದ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

RELATED ARTICLES

Latest News