Sunday, May 19, 2024
Homeಇದೀಗ ಬಂದ ಸುದ್ದಿಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

ನವದೆಹಲಿ, ಏ.14- ಕೆನಡಾದ ದಕ್ಷಿಣ ವ್ಯಾಂಕೋವರ್‍ನಲ್ಲಿ ಭಾರತ ಮೂಲದ 24 ವರ್ಷದ ವಿದ್ಯಾರ್ಥಿಯೊಬ್ಬನನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 24 ವರ್ಷದ ಚಿರಾಗ್ ಆಂಟಿಲ್ ಎಂಬಾತ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದು, ನೆರೆಹೊರೆಯವರು ಗುಂಡಿನ ಸದ್ದು ಕೇಳುತ್ತಿದೆ ಎಂದು ದೂರು ನೀಡಿದ್ದಾರೆ ವ್ಯಾಂಕೋವರ್ ಪೊಲೀಸರು ಹೇಳಿಕೆ ನೀಡಿದ್ದಾರೆ.

ಏ. 12 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಿವಾಸಿಗಳು ಗುಂಡಿನ ಶಬ್ದವನ್ನು ಕೇಳಿದ ನಂತರ ಅಧಿಕಾರಿಗಳನ್ನು ಪೂರ್ವ 55 ನೇ ಅವೆನ್ಯೂ ಮತ್ತು ಮುಖ್ಯ ರಸ್ತೆಗೆ ಕರೆಸಲಾಯಿತು. ಅಲ್ಲಿ ಚಿರಾಗ್ ಆಂಟಿಲ್ ವಾಹನದೊಳಗೆ ಮೃತಪಟ್ಟಿರುವುದು ಕಂಡುಬಂದಿದೆ. ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮುಖ್ಯಸ್ಥ ವರುಣ್ ಚೌಧರಿ ಅವರು ಎಕ್ಸ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡುವಂತೆ ವಿನಂತಿಸಿದ್ದಾರೆ.

ಚಿರಾಗ್ ಆಂಟಿಲ್ ಸೆಪ್ಟೆಂಬರ್ 2022 ರಲ್ಲಿ ವ್ಯಾಂಕೋವರ್‍ಗೆ ಬಂದರು. ಅವರು ಕೆನಡಾ ವೆಸ್ಟ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿ ಇತ್ತೀಚೆಗೆ ಕೆಲಸದ ಪರವಾನಗಿಯನ್ನು ಪಡೆದುಕೊಂಡಿದ್ದರು.

RELATED ARTICLES

Latest News