Sunday, December 1, 2024
Homeಇದೀಗ ಬಂದ ಸುದ್ದಿಹೊಸ ವರ್ಷಾರಣೆಗೆ 2 ಗಂಟೆವರೆಗೂ ಮೆಟ್ರೊ ಸೇವೆ

ಹೊಸ ವರ್ಷಾರಣೆಗೆ 2 ಗಂಟೆವರೆಗೂ ಮೆಟ್ರೊ ಸೇವೆ

ಬೆಂಗಳೂರು,ಡಿ.31-ವರ್ಷಾಚರಣೆ ಹಿನ್ನಲೆಯಲ್ಲಿ ನಗರದ ಜನತೆಯ ಸುರಕ್ಷತೆ ದೃಷ್ಟಿಯಿಂದ ತಡರಾತ್ರಿ 2 ಗಂಟೆವರೆಗೂ ಮೆಟ್ರೊ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವರ್ಷಾಚರಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಜನರು ಸಹ ಪ್ಲಾನ್‍ಗಳನ್ನು ಮಾಡಿಕೊಂಡಿದ್ದಾರೆ.

ನಗರದ ವಿವಿಧೆಡೆ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡು ಸುರಕ್ಷಿತವಾಗಿ ತಮ್ಮ ತಮ್ಮ ಮನೆಗಳಿಗೆ ತಲುಪಲು ಅನುವಾಗುವಂತೆ ಇಂದು ರಾತ್ರಿಯಿಂದ ಬೆಳಗಿನ ಜಾವ 2 ಗಂಟೆವರೆಗೂ ಮೆಟ್ರೊ ಸೇವೆ ಇರಲಿದೆ.
ಎಂಜಿರಸ್ತೆಯಲ್ಲಿ ಹೆಚ್ಚು ಜನ ದಟ್ಟಣೆ ಇರುವುದರಿಂದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ

ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಹೀಗಾಗಿ ವಿಸ್ತೃತ ರೈಲ್ವೆ ಸೇವೆಯನ್ನು ಬಳಸಿಕೊಳ್ಳಲು ಟ್ರಿನಿಟಿ ಅಥವಾ ಕಬ್ಬನ್‍ಪಾರ್ಕ್ ಮೆಟ್ರೊ ನಿಲ್ದಾಣಗಳಿಗೆ ತೆರಳಲು ಸೂಚಿಸಲಾಗಿದೆ.

RELATED ARTICLES

Latest News