ಬೆಂಗಳೂರು, ಡಿ.8- ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ.ಈ ಹಿಂದೆ ಒಂದು ಬಾರಿ ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ ಜಿಬಿಎ ಅಧಿಕಾರಿಗಳು ಈ ಬಾರಿ ಬೀದಿನಾಯಿಗಳಿಗೆ ಪ್ರತಿನಿತ್ಯ ಎರಡು ಬಾರಿ ಚಿಕನ್ ಭಾಗ್ಯ ಕರುಣಿಸಲು ಮನಸು ಮಾಡಿದೆ.
ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ನೀಡಲು ಈ ಹಿಂದಿನ ನಿರ್ಧಾರಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಈಗ ಪ್ರತಿ ನಿತ್ಯ ಎರಡು ಬಾರಿ ಬಾರಿ ಭೋಜನ ವ್ಯವಸ್ಥೆ ಮಾಡಲು ನಿರ್ಧರಿಸಿದೆ.ಕಳೆದ ವಾರ ಸುಪ್ರೀಂ ಕೋರ್ಟ್ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಿ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಎಲ್ಲಾ ರಾಜ್ಯಗಳಿಗೂ ಸೂಚಿಸಿತ್ತು.
ಸರ್ಕಾರಿ ಕಚೇರಿ.. ಶಿಕ್ಷಣ ಸಂಸ್ಥೆಗಳು, ಅಸ್ಪ, ಸ್ಟೇಡಿಯಂ ಸೇರಿದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಿ ಅಂತ ಅದೇಶ ನೀಡಲಾಗಿತ್ತು.ಸುಪ್ರೀಂ ಕೋರ್ಟ್ ಅದೇಶದ ಅನ್ವಯ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಿ.ನಿತ್ಯ ಎರಡು ಬಾರಿ ಚಿಕನ್ ರೈಸ್ ನೀಡೋದಕ್ಕೆ ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಒಂದು ನಾಯಿಗೆ ಒಂದು ಬಾರಿ ಊಟಕ್ಕೆ 25 ರೂ ನಿಗದಿ ಮಾಡಲಾಗಿದೆ. ಹೀಗಾಗಿ ಬೀದಿ ನಾಯಿಗೆ ಪ್ರತಿನಿತ್ಯ 50 ರೂ ಖರ್ಚು ಮಾಡಬೇಕಾಗಿದೆ.ಅದರಲ್ಲಿ 150 ಗ್ರಾಂ ಅಕ್ಕಿ, 100 ಗ್ರಾಂ ಚಿಕನ್ ಸೇರಿರುತ್ತದೆ. ಈಗಾಗಲೇ ಸುಪ್ರೀಂ ಕೋರ್ಟ್ ಸೂಚನೆಯಂತೆ 2206 ಬೀದಿ ನಾಯಿಗಳನ್ನು ಗುರುತು ಮಾಡಲಾಗಿದ್ದು, ಈ ನಾಯಿಗಳ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 67 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಿದೆ.
