ಬೆಂಗಳೂರು, ಜು.21- ವಿದ್ಯುತ್ ಪೂರೈಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಇಂದು ಬೆಳಿಗ್ಗೆ ನಮ್ಮ ಮೆಟ್ರೋ ಹಸಿರು ಮಾರ್ಗದ ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆಯಿತು. ಒತ್ತಡದ ಸಮಯದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಸಂಚರಿ ಮುಂದೆ ಹೋಗುತ್ತಿರಲಿಲ್ಲ
ಈ ತಾಂತ್ರಿಕ ಸಮಸ್ಯೆಯಿಂದ ಯಶವಂತಪುರ ಮತ್ತು ಮಾದಾವರ ನಡುವಿನ ಮೆಟ್ರೋ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರು ವಾಯವ್ಯ ಭಾಗದ ಮಾದಾವರದಿಂದ ದಕ್ಷಿಣ ಭಾಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಪರ್ಕ ಕಲ್ಪಿಸುತ್ತದೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ.ಏನಾಗಿದೆ ಎಂದು ತಿಳಿಯದೆ ಪ್ರಯಾಣಿಕರು ಚಡಪಡಿಸಿದರು.ಕೆಲವರು ಕೊಪದಲ್ಲಿ ವಾಗ್ವದ ಮೂಡಿ ಬಿಎಂಟಿಸಿ ಬಸ್ ಮೊರೆ ಹೋದರು.
ವಿದ್ಯುತ್ ಪೂರೈಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಹಸಿರು ಮಾರ್ಗದಲ್ಲಿ ಬೆಳಿಗ್ಗೆ 8 ಗಂಟೆಯಿಂದ 45 ನಿಮಿಷ ಅಡಚಣೆ ಉಂಟಾಗಿತ್ತು. ತಾಂತ್ರಿಕ ತಂಡಗಳು ತುರ್ತುಗತಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಿದ ಪರಿಣಾಮ ಬೆಳಿಗ್ಗೆ 8.45ರಿಂದ ಗ್ರೀನ್ ಲೈನ್‌ನ ಸಂಪೂರ್ಣ ಮಾರ್ಗದಲ್ಲಿ ಸಾಮಾನ್ಯ ಮೆಟ್ರೋ ಸೇವೆ ಪುನರಾರಂಭವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ನಂತರ ಸೇವೆಯಲ್ಲಿ ಉಂಟಾದ ತಾತ್ಕಾಲಿಕ ವ್ಯತ್ಯಯದ ವೇಳೆ ಸಹಕರಿಸಿದ ಹಾಗೂ ತಾಳೆ ವಹಿಸಿದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಕೃತಜ್ಞತೆ ಸಲ್ಲಿಸಿದೆ.
