ಬೆಂಗಳೂರು,ಅ.18-ಯುವತಿಯೊಬ್ಬಳು ಮದುವೆಯಾಗಲು ಬಯಸಿದ್ದ ತನ್ನ ಬಾಯ್ಫ್ರೆಂಡ್ಗೆ ಕಳುಹಿಸಿದ್ದ ಖಾಸಗಿ ಮತ್ತು ನಗ್ನ ಫೋಟೋಗಳೂ ಅಶ್ಲೀಲ ವೆಬ್ಸೈಟ್ನಲ್ಲಿ ಸೋರಿಕೆಯಾಗಿವೆ.
ಇದರಿಂದ ಆತಂಕಗೊಂಡ ಇಪ್ಪತ್ತೆಂಟು ವರ್ಷದ ಯುವತಿ ಪೂರ್ವವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವತಿ ತನ್ನ ಬಾಯ್ಫ್ರೆಂಡ್ ಮೇಲಿನ ನಂಬಿಕೆಯಿಂದ ತನ್ನ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಸ್ನ್ಯಾಪ್ಚಾಟ್ ಮೂಲಕ ಹಂಚಿಕೊಂಡಿದ್ದಳು.ಈ ನಡುವೆ ಕಿಡಿಗೇಡಿಗಳು ಆ ಖಾತೆಗಳನ್ನು ಹ್ಯಾಕ್ ಮಾಡಿ ಫೋಟೋಗಳನ್ನು ಕಳವು ಮಾಡಿ ಅಶ್ಲೀಲ ವೆಬ್ಸೈಟ್ನಲ್ಲಿ ಪ್ರಚಾರ ಮಾಡಿದ್ದಾರೆ.
ಇಂಟರ್ನೆಟ್ನಲ್ಲಿ ತನ್ನದೇ ಆದ ಖಾಸಗಿ ಫೋಟೋಗಳನ್ನು ನೋಡಿ ಯುವತಿ ಮಾನಸಿಕ ಅಘಾತಕ್ಕೊಳಗಾಗಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
