Wednesday, December 3, 2025
Homeಬೆಂಗಳೂರುಮಹಿಳೆ ಸೇರಿ ಇಬ್ಬರು ವಿದೇಶಿ ಡ್ರಗ್‌ ಪೆಡ್ಲರ್‌ಗಳ ಬಂಧನ : 28.75 ಕೋಟಿ ಮೌಲ್ಯದ ಮಾದಕ...

ಮಹಿಳೆ ಸೇರಿ ಇಬ್ಬರು ವಿದೇಶಿ ಡ್ರಗ್‌ ಪೆಡ್ಲರ್‌ಗಳ ಬಂಧನ : 28.75 ಕೋಟಿ ಮೌಲ್ಯದ ಮಾದಕ ಜಪ್ತಿ

Two foreign drug peddlers, including a woman

ಬೆಂಗಳೂರು,ಡಿ.3- ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿ ಇಬ್ಬರು ವಿದೇಶಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ, ಒಟ್ಟು 28.75 ಕೋಟಿ ಮೌಲ್ಯದ ಮಾದಕ ವಸ್ತುಗಳಾದ ಎಂಡಿಎಂಎ ಕ್ರಿಸ್ಟೆಲ್‌, ಹೈಡ್ರೋಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಂಪಿಗೆಹಳ್ಳಿ: ಬಂಧಿಸಲಾಗಿ ರುವ ವಿದೇಶಿ ಮಹಿಳೆ ಟೂರಿಸ್ಟ್‌ ವೀಸಾದಲ್ಲಿ 2023 ರಲ್ಲಿ ಭಾರತಕ್ಕೆ ಆಗಮಿಸಿ ನಂತರ ದೆಹಲಿಯಿಂದ ನಗರಕ್ಕೆ ಬಂದು ಸಂಪಿಗೆಹಳ್ಳಿಯ ಪಿ ಅಂಡ್‌ಟಿ ಲೇಔಟ್‌ನ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದುಕೊಂಡು ಮನೆಯಲ್ಲಿ ಎಂಡಿಎಂಎ ಡ್ರಗ್ಸ್ ನ್ನು ದಾಸ್ತಾನು ಮಾಡಿಕೊಂಡಿದ್ದರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಲು ಸಿದ್ದಪಡಿಸಿಕೊಂಡಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಆಧಾರದ ಮೇಲೆ ಮನೆ ಮೇಲೆ ದಾಳಿ ಮಾಡಿ, ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದು ಸುಮಾರು 18.50 ಕೋಟಿ ಮೌಲ್ಯದ 9 ಕೆಜಿ 254 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್‌ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಮಹಿಳೆ ನಗರದಲ್ಲಿ ಹೇರ್‌ ಡಿಸೈನ್‌ ಕೆಲಸ ಮಾಡಿಕೊಂಡಿದ್ದು, ಕೆಲಸದ ಜೊತೆಗೆ ಸ್ಥಳೀಯ ಡ್ರಗ್‌ ಪೆಡ್ಲರ್‌ಗಳನ್ನು ಪರಿಚಯ ಮಾಡಿಕೊಂಡು ದೆಹಲಿ ಮತ್ತಿತರ ಕಡೆಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ತನಿಖೆಯಿಂದ ಗೊತ್ತಾಗಿದೆ.

ಸಿದ್ದಾಪುರ:
ಬ್ಯುಸಿನೆಸ್‌‍ ವೀಸಾ ಪಡೆದು 2021 ರಲ್ಲಿ ದೆಹಲಿಗೆ ಬಂದು ನಂತರ 2022 ರಲ್ಲಿ ನಗರಕ್ಕೆ ಬಂದು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 2.25 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಲ್‌ಬಾಗ್‌ ಸೌತ್‌ ಗೇಟ್‌ನ ಬಾಸ್ಕೆಟ್‌ಬಾಲ್‌ ಕೋರ್ಟ್‌ ಬಳಿ ಪ್ರತಿನಿತ್ಯ ವಿದೇಶಿ ಪ್ರಜೆಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಡ್ರಗ್‌ ಪೆಡ್ಲಿಂಗ್‌ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ಈ ಮಾಹಿತಿಯನ್ನು ಆಧರಿಸಿ ಇನ್‌್ಸಪೆಕ್ಟರ್‌ ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿ ತಂಡ ಸ್ಥಳದ ಮೇಲೆ ದಾಳಿ ಮಾಡಿ ಮಾದಕ ವಸ್ತುಗಳ ಸಮೇತ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಈ ವಿದೇಶಿ ಪ್ರಜೆ ವಿರುದ್ಧ ಈ ಹಿಂದೆಯೂ ಗೋವಿಂದಪುರ ಪೊಲೀಸ್‌‍ ಠಾಣೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಿಡುಗಡೆ ನಂತರವೂ ಸಹ ಮತ್ತೆ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಈತ ದೆಹಲಿ, ಗೋವಾ ಹಾಗೂ ಸ್ಥಳೀಯ ವಿದೇಶಿ ಡ್ರಗ್‌ ಪೆಡ್ಲರ್‌ಗಳಿಂದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ನ್ನು ಕಡಿಮೆ ಬೆಲೆಗೆ ಖರೀದಿಸಿ, ನಗರದಲ್ಲಿ ನಲೆಸಿರುವ ಮತ್ತೊಬ್ಬ ವಿದೇಶಿ ಪ್ರಜೆಯ ಮೂಲಕ ಪರಿಚಯಸ್ಥ ಗಿರಾಕಿಗಳಿಗೆ ಡ್ರಾಪ್‌ಲೊಕೇಷನ್‌ ಆಧರಿಸಿ ಡ್ರಗ್‌್ಸ ಸರಬರಾಜು ಮಾಡುತ್ತಿದ್ದನು ಎಂಬುವುದು ಗೊತ್ತಾಗಿದೆ.

ಅಂಚೆ ಕಚೇರಿಗೆ ಪಾರ್ಸಲ್‌:
ಚಾಮರಾಜಪೇಟೆಯಲ್ಲಿರುವ ಫಾರಿನ್‌ಪೋಸ್ಟ್‌ ಆಫೀಸ್‌‍ನ ಕೆಲವು ಪಾರ್ಸಲ್‌ಗಳಲ್ಲಿ ಮಾದಕ ವಸ್ತುಗಳು ಇರುವ ಬಗ್ಗೆ ಕಸ್ಟಮ್ಸೌ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ಸುಮಾರು 8 ಕೋಟಿ ಮೌಲ್ಯದ 8 ಕೆಜಿ ಹೈಡ್ರೋಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪಾರ್ಸಲ್‌ಗಳಲ್ಲಿ ವ್ಯವಸ್ಥಿತವಾಗಿ ಮಾದಕ ವಸ್ತು ಪ್ಯಾಕ್‌ ಮಾಡಿ ವಿದೇಶಿ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.

RELATED ARTICLES

Latest News