ಬೆಂಗಳೂರು,ಜ.1- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಭಾಶಯ ತಿಳಿಸಲು ಬರುವ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೂವಿನ ಗುಚ್ಛ ಹಾಗೂ ಸಿಹಿ ತಿನಿಸುಗಳು ಹಾಗೂ ಉಡುಗೊರೆಗಳನ್ನು ತಂದು ಹಣ ವ್ಯರ್ಥ ಮಾಡುವ ಬದಲು ಸಂಕಷ್ಟದಲ್ಲಿರುವ ಬಡವರು, ವೃದ್ಧಾಶ್ರಮಗಳು ಹಾಗೂ ಅನಾಥಶ್ರಮಗಳಿಗೆ ಆ ಹಣ ವಿನಿಯೋಗಿಸಿದರೆ ಅವರಿಗೆ ನೆರವಾಗಲಿದೆ ಎಂಬ ಸಂದೇಶವನ್ನು ನೀಡುವ ಮೂಲಕ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಮಾದರಿ ಯಾಗಿದ್ದಾರೆ.
ಅನಾಥಾಶ್ರಮಗಳಿಗೆ ಮಾಡಿರುವ ಸಹಾಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೂ ಮಾದರಿ ಯಾಗುವಂತೆ ಎಸಿಪಿಗಳು, ಇನ್ಸ್‍ಪೆಕ್ಟರ್‍ಗಳಿಗೆ ಆಯುಕ್ತರು ವರ್ಚುಲ್ ಸಭೆ ಮೂಲಕ ಸಲಹೆ ನೀಡಿದ್ದಾರೆ. ಪೊಲೀಸ್ ಆಯುಕ್ತರ ಈ ನಡೆಗೆ ನಗರ ಕಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವಾಹಿನಿಯಲ್ಲಿ ಹೂಡಿಕೆ: ಡಿ.ಕೆ.ಶಿವಕುಮಾರ್ ದಂಪತಿಗೆ ಸಿಬಿಐ ನೋಟಿಸ್
ಆಯುಕ್ತರ ಸಲಹೆಯಂತೆ ಸಿಬ್ಬಂದಿ ವರ್ಗ ತಮ್ಮ ಕೈಲಾದ ಹಣದಿಂದ ಅನಾಥಾಶ್ರಮದ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್, ಸಿಹಿ ತಿನಿಸುಗಳನ್ನು ನೀಡಿ ಅವರೊಂದಿಗೆ ಬೆರೆತು ಸಂತಸ ಹಂಚಿಕೊಂಡಿದ್ದಾರೆ.