Sunday, October 6, 2024
HomeಬೆಂಗಳೂರುBIG NEWS : ತುಂಡು ತುಂಡಾಗಿ ಕತ್ತರಿಸಿದ ಯುವತಿಯ ಮೃತದೇಹ ಫ್ರಿಡ್ಜ್‌ನಲ್ಲಿ ಪತ್ತೆ , ಬೆಚ್ಚಿಬಿದ್ದ...

BIG NEWS : ತುಂಡು ತುಂಡಾಗಿ ಕತ್ತರಿಸಿದ ಯುವತಿಯ ಮೃತದೇಹ ಫ್ರಿಡ್ಜ್‌ನಲ್ಲಿ ಪತ್ತೆ , ಬೆಚ್ಚಿಬಿದ್ದ ಬೆಂಗಳೂರು

Bengaluru Shocking : Woman's chopped body found in a Refrigerator

ಬೆಂಗಳೂರು, ಸೆ.21- ಯುವತಿಯನ್ನು 15ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿ, ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ಬಾಗಿಲು ಹಾಕಿಕೊಂಡು ದುಷ್ಕರ್ಮಿ ಪರಾರಿಯಾಗಿರುವ ಘಟನೆ ವೈಯ್ಯಾಲಿಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶ್ವರಂ ಪೈಲ್‌ಲೈನ್‌ ರಸ್ತೆ ಆಶ್ರಮ ಸಮೀಪ ಜಯರಾಮ್‌ ಎಂಬುವವರ ಮನೆಯಲ್ಲಿ ಈ ಭೀಕರ ಕೊಲೆ ನಡೆದಿದೆ. ಸುಮಾರು 30 ವರ್ಷದ ಯುವತಿ ಇವರ ಮನೆಯ ಒಂದನೇ ಮಹಡಿಯಲ್ಲಿ ಬಾಡಿಗೆಗೆ ಇದ್ದರು. ಹಲವು ದಿನಗಳಿಂದ ಮನೆ ಬೀಗ ಹಾಕಿತ್ತು. ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಅಕ್ಕ-ಪಕ್ಕದವರು ಅವರ ಸಂಬಂಧಿಕರಿಗೆ ತಿಳಿಸಿ, ಬಾಗಿಲು ತೆಗೆಸಿದಾಗಲೇ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್‌್ಸ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಯಾರು ಈಕೆಯನ್ನು ಹೀಗೆ ಬರ್ಭರವಾಗಿ ಕೊಲೆ ಮಾಡಿ, ದೇಹದ ಬಾಗಗಳನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿದ್ದಾರೆಂದು ತಿಳಿದು ಬಂದಿಲ್ಲ.

ಸುದ್ದಿ ತಿಳಿದ ವೈಯ್ಯಾಲಿಕಾವಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಲೆಯಾಗಿರುವ ಯುವತಿಯ ಹೆಸರು ಮತ್ತು ವಿವರ ತಿಳಿದು ಬಂದಿದೆ. ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದರು.

RELATED ARTICLES

Latest News