ಬೆಂಗಳೂರು,ಆ.19-ನಗರ ಪೊಲೀಸರು ಮಹಿಳೆ ಸೇರಿದಂತೆ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿ 5.40 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕವಸ್ತು
ಎಂಡಿಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಂಡಿದ್ದಾರೆ. ಅಪರಿಚಿತ ವಿದೇಶಿ ವ್ಯಕ್ತಿಯೊಬ್ಬ ಎಲೆಕ್ಟ್ರಾನಿಕ್‌ಸಿಟಿ 1ನೇ ಹಂತದ ಬೆಟ್ಟದಾಸನಪುರ, ಕೇರಳ ಮಸೀದಿ ರಸ್ತೆಯಲ್ಲಿರುವ ಮಹಾಲಕ್ಷಿ ಲೇಔಟ್‌ನ ಖಾಲಿ ಜಾಗದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್ ಠಾಣೆಯ ಅಧಿಕಾರಿಗೆ ಖಚಿತ ಮಾಹಿತಿಯೊಂದು ದೊರೆತಿದೆ.
ಈ ಮಾಹಿತಿಯನ್ನು ಆಧರಿಸಿ, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸ್ಥಳದ ಮೇಲೆ ದಾಳಿಮಾಡಿ, ಒಬ್ಬ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಪರಿಚಯವಿರುವ ವಿದೇಶಿ ಮಹಿಳೆಯಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕವಸ್ತು ಎಂಡಿಎಂಎ ಕ್ಟ್ರಿಸ್ಟಲ್‌ನ್ನು ಖರೀದಿ ಮಾಡಿಕೊಂಡು ಬಂದು, ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿರುತ್ತಾನೆ.
ಪೊಲೀಸರು ಆತನ ವಶದಲ್ಲಿದ್ದ 180 ಗ್ರಾಂ ಎಂಡಿಎಂಎ ಕ್ರಿಸ್ಟಲ್, 1 ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ನೀಡಿದ ಮಾಹಿತಿ ಮೇರೆಗೆ ಎಂಡಿಎಂಎ ಕ್ರಿಸ್ಟಲ್‌ನ್ನು ಪೂರೈಸುತ್ತಿದ್ದ ಒಬ್ಬ ವಿದೇಶಿ ಮಹಿಳೆಯನ್ನು ದೊಡ್ಡತೋಗೂರು ಕ್ರಾಸ್ ಬಳಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ತಾನು ಪರಿಚಯವಿರುವ ಮತ್ತೊಬ್ಬ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್‌ನ್ನು ಖರೀದಿ ಮಾಡಿರುವುದಾಗಿ ಹೇಳಿದ್ದಾಳೆ.
ಈ ವಿದೇಶಿ ಮಹಿಳೆಯನ್ನು ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಲಾಗಿದೆ.ಈ ಆರೋಪಿಗಳಿಬ್ಬರು ನೀಡಿದ ಮಾಹಿತಿ ಮೇರೆಗೆ, ವಿದ್ಯಾರಣ್ಯಪುರದ ಆರೋಪಿತೆಯ ವಾಸದ ಮನೆಯಿಂದ 1 ಕೆ.ಜಿ 514 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ನ್ನು ಹಾಗೂ ಹುಳಿಮಾವಿನಲ್ಲಿ ಆರೋಪಿಯ ವಾಸದ ಮನೆಯಲ್ಲಿದ್ದ 456 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 5 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್ ನವೀನ್ , ಸಬ್ ಇನ್‌್ಸ ಪೆಕ್ಟರ್‌ಗಳಾದ ರವಿಚಂದ್ರ , ದರ್ಶನ್ ಅಲಗೂರ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಿಸಿಬಿ ಕಾರ್ಯಾಚರಣೆ -40 ಲಕ್ಷ ಮೌಲ್ಯದ ಕ್ರಿಸ್ಟಲ್ ವಶ: ಸಿ.ಸಿ.ಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ವಿದೇಶಿ ಡ್ರಗ್‌ಪೆಡ್ಲರ್‌ನನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ 255 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪ ಲೇಔಟ್‌ನ ಮನೆಯೊಂದರಲ್ಲಿ ವಾಸವಾಗಿರುವ ವಿದೇಶಿ ವ್ಯಕ್ತಿಯೊಬ್ಬ ನಿಷೇಧಿತ ಎಂಡಿಎಂಎ ಕ್ರಿಸ್ಟಲ್‌ನ್ನು ಸಂಗ್ರಹಿಸಿಟ್ಟುಕೊಂಡು ಪರಿಚಯವಿರುವ ಗಿರಾಕಿಗಳಿಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿದೆ.
ಈ ಮಾಹಿತಿಯನ್ನಾದರಿಸಿ, ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ಕೈಗೊಂಡು, ಸ್ಥಳದ ಮೇಲೆ ದಾಳಿ ಮಾಡಿ, ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ, 2024ನೇ ಸಾಲಿನ ಅಕ್ಟೋಬರ್‌ನಲ್ಲಿ ಪ್ರವಾಸಿ ವೀಸಾದಡಿಯಲ್ಲಿ ದೆಹಲಿಗೆ ಬಂದು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ತದ ನಂತರ ಬೆಂಗಳೂರಿಗೆ ಬಂದು, ಅವಲಹಳ್ಳಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಹಣವು ಸಾಲದೇ ಇದ್ದುದರಿಂದ ಎಂಡಿಎಂಎ ಕ್ರಿಸ್ಟೆಲ್‌ನ್ನು ಮಾರಾಟ ಮಾಡಿಕೊಂಡು ಹೆಚ್ಚಿನ ಹಣ ಸಂಪಾದನೆ ಮಾಡುತ್ತಿರುವುದಲ್ಲದೇ, ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಿಳಿದು ಬಂದಿರುತ್ತದೆ.
ಆತನ ವಶದಲ್ಲಿದ್ದ 255 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ 1 ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದು ಇದರ ಮೌಲ್ಯ 40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆತನಿಗೆ ಪರಿಚರಯವಿರುವ ವಿದೇಶದಲ್ಲಿರುವ ವ್ಯಕ್ತಿಯೊಬ್ಬನಿಂದ ಎಂಡಿಎಂಎ ಕ್ರಿಸ್ಟಲ್‌ನ್ನು ಕಡಿಮೆ ಬೆಲೆಗೆ ಖರೀದಿಸುತ್ತಿರುವುದಾಗಿ ತಿಳಿಸಿದ್ದು ತನಿಖೆ ಮುಂದುವರೆದಿದೆ.
ವೈದ್ಯರ ಮನೆಯಲ್ಲೇ ಚಿನ್ನಾಭರಣ ಕದ್ದಿದ್ದ ಅತ್ತಿಗೆ-ಮೈದುನನ ಬಂಧನ
ಕೆಲಸಕ್ಕಿದ್ದ ವೈದ್ಯರ ಮನೆಯಲ್ಲೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಮಹಿಳೆ ಹಾಗೂ ಆಕೆಯ ಮೈದುನನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿ 22 ಲಕ್ಷ ರೂ. ಬೆಲೆಯ ವಜ್ರ ಹಾಗೂ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳು, ಬೆಲೆ ಬಾಳುವ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಮೂಲದ ಕೆಲಸದಾಕೆ ಹಾಗೂ ಆಕೆಯ ತಂಗಿಯ ಗಂಡನನ್ನು ಬಂಧಿಸಲಾಗಿದೆ.
ಜಯನಗರ 1ನೇ ಬ್ಲಾಕ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವೈದ್ಯರೊಬ್ಬರು ವಾಸವಾಗಿದ್ದು, ಇವರ ಮನೆಯಲ್ಲಿ ಕೆಲಸಕ್ಕೆಂದು ಆಂಧ್ರಪ್ರದೇಶದ ಖಾಕಿನಾಡಿನ ಮಹಿಳೆಯೊಬ್ಬರನ್ನು ಒಂದೂವರೆ ವರ್ಷದಿಂದ ಕೆಲಸಕ್ಕೆ ನೇಮಿಸಿಕೊಂಡಿದ್ದರು. ವೈದ್ಯರು ಜು.28 ರಂದು ಆಸ್ಪತ್ರೆಯ ಕೆಲಸ ಮುಗಿಸಿ ಮನೆಗೆ ಬಂದು, ವಿಶ್ರಾಂತಿ ಪಡೆದು, ನಂತರ ಸಂಜೆ ಎದ್ದು ಆಸ್ಪತ್ರೆಗೆ ಹೊರಡಲು ನೋಡಿದಾಗ ಮನೆಕೆಲಸದಾಕೆಯು ಕಾಣಿಸಿಲ್ಲ. ಆಗ ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆ್ ಆಗಿರುವುದು ಕಂಡುಬಂದಿದೆ.
ಕೆಲಸದಾಕೆಯ ಮೇಲೆ ಅನುಮಾನಗೊಂಡ ವೈದ್ಯರು ಮನೆಯ ಕಬೋರ್ಡ್ ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ವಜ್ರ ಹಾಗೂ ಚಿನ್ನದ ಆಭರಣಗಳು, ಬೆಳ್ಳಿಯ ವಸ್ತುಗಳು, ಮೊಬೈಲ್ ೇನ್‌ಗಳು, ಬೆಲೆಬಾಳುವ ವಾಚ್‌ಗಳು ಕಾಣೆಯಾಗಿದ್ದವು. ಇವುಗಳನ್ನು ಕೆಲಸದಾಕೆಯೇ ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ಅನುಮಾನ ವ್ಯಕ್ತಪಡಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ವ್ಯದ್ಯರ ಮನೆಯಲ್ಲಿ ಕೆಲಸಮಾಡುತ್ತಿದ್ದ ಕೆಲಸದಾಕೆಯನ್ನು ತೆಲಂಗಾಣ ರಾಜ್ಯದ ನ್ಯೂ ರಂಗಪುರ್ ಗ್ರಾಮದಲ್ಲಿರುವ ಆಕೆಯ ತಂಗಿಯ ವಾಸದ ಮನೆಯಿಂದ ಬಂಧಿಸಿ, ಪ್ರಕರಣದಲ್ಲಿ ಕಳುವಾಗಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಕೆಲಸದಾಕೆಯನ್ನು ವಿಚಾರಣೆಗೊಳಪಡಿಸಿದಾಗ ವಜ್ರದ ರಿಂಗ್, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾಳೆ. ಕಳವು ಮಾಡಿದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಂಡು ವಜ್ರದ ರಿಂಗ್‌ನ್ನು ಆಕೆಯ ತಂಗಿಯ ಗಂಡನ ಮುಖಾಂತರ ಮಾರಾಟ ಮಾಡಿಸಿರುವುದಾಗಿ ತಿಳಿಸಿರುತ್ತಾಳೆ. ನಂತರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆಕೆಯ ಹೇಳಿಕೆ ಮೇರೆಗೆ ತೆಲಂಗಾಣದ ರಂಗಪುರಂ ಗ್ರಾಮದ ಜ್ಯುವೆಲರಿ ಅಂಗಡಿಯಿಂದ 10.45 ಗ್ರಾಂ ವಜ್ರದ ರಿಂಗ್‌ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಒಟ್ಟು 5.40 ಗ್ರಾಂ ವಜ್ರದ ರಿಂಗ್, 10.45 ಗ್ರಾಂ ವಜ್ರದ ಓಲೆ, 11.50 ಗ್ರಾಂ ಚಿನ್ನಾಭರಣ, 1 ಕೆ.ಜಿ 62 ಗ್ರಾಂ. ಬೆಳ್ಳಿಯ ವಸ್ತುಗಳು, 4 ಮೊಬೈಲ್ ೇನ್‌ಗಳು, 5 ಬೆಲೆಬಾಳುವ ವಾಚ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 22 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಮೋಹನ್.ಡಿ.ಪಟೇಲ್ ಹಾಗೂ ಇತರೆ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಮಾದಕ ವಸ್ತು ಮಾರಾಟ: ಕೇರಳದ ಮೂವರು ಸೇರಿ ನಾಲ್ವರ ಬಂಧನ
ಈಶಾನ್ಯ ವಿಭಾಗದ ಯಲಹಂಕ ಮತ್ತು ಸಂಪಿಗೆಹಳ್ಳಿ ಠಾಣೆ ಪೊಲೀಸರು ಹೊರ ರಾಜ್ಯದ ಮೂವರು ಆರೋಪಿಗಳು ಸೇರಿದಂತೆ ನಾಲ್ವರನ್ನು ಬಂಧಿಸಿ 18.40 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಕಾರು, ಬೈಕು ಹಾಗೂ 3 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಸಂಪಿಗೆಹಳ್ಳಿ : ಶ್ರೀರಾಮಪುರ ಮುಖ್ಯರಸ್ತೆಯ ಜಾಲಿ ಮರದ ತೋಪಿನ ಬಳಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿಯು ಹಾಸನದಲ್ಲಿರುವ ಸಹಚರನ ಬಗ್ಗೆ ಮಾಹಿತಿಯನ್ನು ನೀಡಿದ್ದು, ಆತನಿಂದ ಎಂಡಿಎಂಎ ಖರೀದಿಸಿ ನಗರಕ್ಕೆ ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಆತನಿಂದ ಸುಮಾರು 30 ಗ್ರಾಂ. ಎಂಡಿಎಂಎ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬಜಾಜ್ ಪಲ್ಸರ್ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಇನ್ಸ್ ಪೆಕ್ಟರ್ ಚಂದ್ರಶೇಖರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ3.40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ.
ಯಲಹಂಕ:
ಕೇರಳ ಮೂಲದ ಮೂವರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ 117 ಗ್ರಾಂ ಎಂಡಿಎಂಎ, ಕಾರು, ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾರೆ.ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ, ಸಬ್‌ಇನ್ಸ್ ಪೆಕ್ಟರ್ ಭೂತೇಶ್ ಮತ್ತು ಸಿಬ್ಬಂದಿ ತಂಡ ಕೈಗೊಂಡಿತ್ತು.
ಗಾಂಜಾ ಮಾರಾಟ : ತ್ರಿಪುರದ ವ್ಯಕ್ತಿ ಸೆರೆ
ಹೆಚ್ಚಿನ ಹಣ ಸಂಪಾದನೆಗಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತ್ರಿಪುರ ರಾಜ್ಯದ ವ್ಯಕ್ತಿಯನ್ನು ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 13.40 ಲಕ್ಷ ರೂ. ಮೌಲ್ಯದ 22 ಕೆಜಿ 180 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಿಡಬ್ಲ್ಯೂ ಎಸ್‌ಎಸ್‌ಬಿ ಕಾಂಪೌಂಡು ಮುಂಭಾಗ, ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತ್ರಿಪುರ ರಾಜ್ಯದವನೆಂದು ತಿಳಿಸಿದ್ದಾನೆ.
ಆತ ಗಾಂಜಾವನ್ನು ತ್ರಿಪುರಾ ರಾಜ್ಯದಿಂದ ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು, ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ. ಆರೋಪಿಯ ಬಳಿ ಇದ್ದ ಬ್ಯಾಗ್‌ನ್ನು ಪೊಲೀಸರು ಪರಿಶೀಲಿಸಿ ಅದರಲ್ಲಿದ್ದ 22 ಕೆ.ಜಿ 180 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು ಇದರ ಮೌಲ್ಯ13.40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದ್ದು, ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಹೆಚ್‌ಎಸ್‌ಆರ್ ಲೇಔಟ್ ಠಾಣೆ ಇನ್‌್ಸಪೆಕ್ಟರ್ ಹರೀಶ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿ ಸೆರೆ : 48 ಮೊಬೈಲ್‌ಗಳ ಜಪ್ತಿ
ನಿಷೇದಿತ ಮಾದಕ ವಸ್ತು ಮಾರಾಟದಲ್ಲಿ ತೊಡಗಿ ತಲೆಮರಿಸಿಕೊಂಡಿದ್ದ ಆರೋಪಿ ಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ರೂ. ಬೆಲೆಯ ವಿವಿಧ ಕಂಪನಿಯ 48 ಮೊಬೈಲ್ ಪೋನ್‌ಗಳ ವಶಪಡಿಸಿಕೊಂಡಿದ್ದಾರೆ. ಕೋರಮಂಗಲದಲ್ಲಿರುವ ಹೊಟೇಲ್‌ನ ರೂಮ್‌ವೊಂದರಲ್ಲಿ ನಾಲ್ಕೈದು ಮಂದಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಮೇರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳದ ಮೇಲೆ ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದು 12.62 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.
ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ವ್ಯಕ್ತಿಯನ್ನು ಗೋರಿಪಾಳ್ಯದಲ್ಲಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಆರೋಪಿಯು ಇತರೆ ನಾಲ್ವರು ಆರೋಪಿಗಳೊಂದಿಗೆ ಸೇರಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗಿ ತಿಳಿಸಿದ್ದು, ಆತನ ಬಳಿಯಿದ್ದ ಹಲವಾರು ಮೊಬೈಲ್‌ಗಳ ಬಗ್ಗೆ ವಿಚಾರಿಸಿದಾಗ, ಮೊಬೈಲ್‌ಗಳು ಕಳುವಿಗೆ ಸಂಬಂಧಪಟ್ಟಿವೆ ಎಂದು ಹೇಳಿದ್ದಾನೆ.ಆತನ ಬಳಿ ಇದ್ದ 48 ಮೊಬೈಲ್ ೇನ್‌ಗಳನ್ನು ಇತರರಿಂದ ಸ್ವೀಕರಿಸಿದ್ದಾಗಿ ತಿಳಿಸಿದ್ದು, ಈ ಫೋನ್‌ಗಳ ವಾರಸುದಾರರನ್ನು ಪತ್ತೆ ಮಾಡಿ, ಹಿಂತಿರುಗಿಸುವ ಕಾರ್ಯಚಾರಣೆ ಪ್ರಗತಿ ಯಲ್ಲಿದೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಲೋಯಿಯಾ ರಾಮರೆಡ್ಡಿ ಹಾಗೂ ಸಿಬ್ಬಂದಿ ಯವರ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.