Thursday, September 19, 2024
Homeಬೆಂಗಳೂರುಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾಳೆ : 5ನೇ ಮಹಡಿಗೆ ಹತ್ತಿ ಯುವಕ ರಂಪಾಟ

ಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾಳೆ : 5ನೇ ಮಹಡಿಗೆ ಹತ್ತಿ ಯುವಕ ರಂಪಾಟ

ಬೆಂಗಳೂರು,ಆ.8- ನಿರ್ಮಾಣ ಹಂತದ ಕಟ್ಟಡವೊಂದರ 5ನೇ ಮಹಡಿಗೆ ಹತ್ತಿದ 27 ವರ್ಷದ ವ್ಯಕ್ತಿಯೊಬ್ಬ ಇಲ್ಲಿಂದ ಹಾರಿ ಸಾಯುವುದಾಗಿ ಕೂಗಿಕೊಳ್ಳುತ್ತಾ ಕೆಲಕಾಲ ಆತಂಕ ಮೂಡಿಸಿದ್ದಾನೆ. ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಬಂದ ಯುವಕನೊಬ್ಬ 5ನೇ ಮಹಡಿ ಅತ್ತಿ ನಾನು ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗಿಕೊಳ್ಳುತ್ತಿದ್ದ.

ಇದನ್ನು ಗಮನಿಸಿದ ಸ್ಥಳೀಯರು ತಕ್ಷಣಪೊಲೀಸರಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಸತತ 4 ಗಂಟೆಗೂ ಹೆಚ್ಚು ಕಾಲ ಆ ಯುವಕನ ಮನವೊಲಿಸಿ ಕಟ್ಟಡದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಯುವಕನನ್ನು ವಿಚಾರಿಸಿದಾಗ ನಾನು ಬೆಂಗಳೂರು-ಬಳ್ಳಾರಿ ರಸ್ತೆಯ ಹುಣಸಮಾರನಹಳ್ಳಿ ನಿವಾಸಿ ಎಂದು ತಿಳಿಸಿದ್ದಾನೆ.

ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾಳೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಆ ಕೆಲಸ ತೊರೆದಿದ್ದಾಗಿ ಆತ ತಿಳಿಸಿದ್ದಾನೆ. ನಂತರ ಪೋಷಕರನ್ನು ಕರೆಸಿ ಆತನನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ. ಈ ಯುವಕ ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಖಿನ್ನತೆಗೆ ಒಳಗಾಗಿ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News