ಬೆಂಗಳೂರು, ಡಿ.12- ವಿವಿಧ ಪ್ರತಿಷ್ಠಿತ ಇನ್ಶ್ಯೂರೆನ್ಸ್ ಕಂಪನಿಗಳ ಹೆಸರನ್ನು ಬಳಸಿಕೊಂಡು ಅವಪೂರ್ವ ಪಾಲಿಸಿಗಳನ್ನು ಹಿರಿಯ ನಾಗರಿಕರಿಗೆ ನೀಡುವುದಾಗಿ ಆಮಿಷವೊಡ್ಡಿ ಅವರಿಂದ ಹಣವನ್ನು ಕಟ್ಟಿಸಿಕೊಂಡು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉದಯ್ ಮತ್ತು ತೀರ್ಥ ಬಂತ ಆರೋಪಿಗಳು. ಇವರಿಬ್ಬರು 1.80 ಕೋಟಿ ಸಂಗ್ರಹಿಸಿದ್ದು, ಈ ಹಣದ ಪೈಕಿ 40 ಲಕ್ಷ ಹಣವನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರಿಕರಿಗೆ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಇಬ್ಬರು ಆರೋಪಿಗಳು ಇನ್ಶ್ಯೂರೆನ್ಸ್ ಕಂಪನಿಗಳಾದ ಬಜಾಜ್ ಅಲೆಯನ್ಸ್, ಎಚ್ಡಿಎಫ್ಸಿ, ರಿಲಾಯನ್ಸ್, ಭಾರತೀಯ ಆಕ್ಸಾ, ಕೋಟಕ್ ಮಹೀಂದ್ರ, ಇಂಡಿಯಾ ಫಸ್ಟ್ ಮತ್ತಿ ರಿಲಾಯನ್ಸ್ ನಿಪ್ಪಾನ್ ಕಂಪೆನಿಯ ಹೆಸರನ್ನು ಬಳಸಿಕೊಂಡು ಶ್ರೀನಿ ಇನೋಸೋರ್ಸ್ ಎಂಬ ಕಛೇರಿಯನ್ನು ನಡೆಸುತ್ತಿದ್ದರು.
ಈ ಕಛೇರಿಯಲ್ಲಿ ನಾಲ್ಕೈದು ಮಂದಿ ಟೆಲಿಕಾಲ್ ಸೆಂಟರ್ ಕೆಲಸ ಮಾಡುತ್ತಿದ್ದರು. ಅವರುಗಳಿಗೆ ಪೊನ್ಕಾಲ್ ಲಿಸ್ಟ್ ನೀಡಿ, ಲ್ಯಾಪ್ಸ್ ಆಗಿರುವ ಪಾಲಿಸಿದಾರರುಗಳಿಗೆ ಪಾಲಿಸಿ ಹಣ ಕಟ್ಟಿದಲ್ಲಿ ಇನ್ಸ್ಶ್ಯೂರೆನ್ಸ್ ಹಣವು ದೊರೆಯುವುದು ಅಥವಾ ಈಗಾಗಲೇ ಕಂತನ್ನು ಕಟ್ಟಿ ಬಿಟ್ಟಿರುವ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್ಸು ನೀಡಲಾಗುವುದು ಎಂದು ಹೇಳಿಸುವ ಕೆಲಸವನ್ನು ಮಾಡುಸುತ್ತಿದ್ದರು.
ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಅಲ್ಲದೆ, ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ ಒಂದು ಕೋಟಿಯ ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ಹಣವು ಬರುತ್ತದೆಯೆಂದು ನಂಬಿಸಿ, ಅವರ ಸಂಬಂಕರು, ಸ್ನೇಹಿತರ ಹೆಸರಿನಲ್ಲಿಯೂ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಅಮೀಷವೊಡ್ಡುತ್ತಿದ್ದರು. ಈ ರೀತಿ ವಂಚನೆ ಮಾಡುವ ಉದ್ದೇಶದಿಂದ ಅಮಾಯಕ ಜನರಿಂದ ಹಣವನ್ನು ಕಟ್ಟಿಸಿಕೊಂಡು ತಮ್ಮ ಸ್ವಂತ ಅಕೌಂಟ್ ಹಾಗೂ ತಮ್ಮ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರು.
ಪಾಲಿಸಿ ಹಣವನ್ನು ಪಡೆಯಲು ಸ್ವಲ್ಪ ಮುಂಗಡವನ್ನು ಕಟ್ಟುವಂತೆ ಹಣದ ಆಮಿಷವೊಡ್ಡಿ, ಅಮಾಯಕ ಜನರಿಂದ ಸುಮಾರು 1.80 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ ಹಣದ ಪೈಕಿ 40 ಲಕ್ಷ ಹಣವನ್ನು ಹಣವನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರಿಕರಿಗೆ ವಂಚನೆ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ ಇದೇ ರೀತಿ ಸೈಬರ್ ವಂಚನೆಯ ಹಲವು ಪ್ರಕರಣಗಳು ತನಿಖೆಯಿಂದ ಪತ್ತೆಯಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಉಪ ಪೊಲೀಸ್ ಆಯುಕ್ತರು, ಅಪರಾಧ-1 ರವರ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಯಶಸ್ವಿಯಾಗಿರುತ್ತಾರೆ.