Wednesday, September 11, 2024
Homeಮನರಂಜನೆನ.15ಕ್ಕೆ ಶಿವಣ್ಣನ ಭೈರತಿ ರಣಗಲ್ ಚಿತ್ರ ಬಿಡುಗಡೆ

ನ.15ಕ್ಕೆ ಶಿವಣ್ಣನ ಭೈರತಿ ರಣಗಲ್ ಚಿತ್ರ ಬಿಡುಗಡೆ

Bhairathi Ranagal

ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಭೈರತಿ ರಣಗಲ್ ಚಿತ್ರ ಇದೇ ಆಗ್ಟ್‌‍ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರದಿಂದ ಚಿತ್ರ ಬಿಡುಗಡೆ ಮುಂದೆ ಹೋಗಿತ್ತು. ಆನಂತರ ಅಭಿಮಾನಿಗಳು ಈ ಚಿತ್ರ ಯಾವಾಗ ಬಿಡುಗಡೆಯಾಗಬಹುದೆಂದು ಕಾತುರದಿಂದ ಕಾಯುತ್ತಿದ್ದರು. ನವೆಂಬರ್‌ 15ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರ ಬಿದ್ದಾದ ಮೇಲೆ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿರುವ ಗೆಲರಿಯಾ ಮಾಲ್‌ನಲ್ಲಿ ಇದೇ ಮೊದಲ ಬಾರಿಗೆ ವಿನೂತನವಾಗಿ ನಿರ್ಮಿಸಲಾಗಿದ್ದ ಅತೀ ದೊಡ್ಡ ಗ್ರಾಫಿಟಿ ಆರ್ಟ್‌ ಅನಾವರಣಗೊಳಿಸುವ ಮೂಲಕ ಭೈರತಿ ರಣಗಲ್‌‍ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು. ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌, ನಿರ್ದೇಶಕ ನರ್ತನ್‌ ಹಾಗೂ ನಿವೇದಿತಾ ಶಿವರಾಜ್‌ ಕುಮಾರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಸ್ರ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌ ಅವರು, ಭೈರತಿ ರಣಗಲ್‌‍ ನಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ನಮ ಸಂಸ್ಥೆಯ ಮೊದಲ ಚಿತ್ರ ವೇದಗೆ ನೀವೆಲ್ಲಾ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ.

ಈ ಚಿತ್ರಕ್ಕೂ ನಿಮೆಲ್ಲರ ಪ್ರೋತ್ಸಾಹವಿರಲಿ ಎಂದರು. ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನವಾಗಿ ಅನ್ಸೌ್‌ ಮಾಡಲು ನಿರ್ಧರಿಸಲಾಗಿತ್ತು. ಇದೇ ಮೊದಲ ಬಾರಿಗೆ 4800 ವಿಸ್ತೀರ್ಣದ ಬೃಹತ್‌ ಗ್ರಾಫಿಟಿ ಆರ್ಟ್‌ ಅನಾವರಣ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನರ್ತನ್.

ಬಹು ನಿರೀಕ್ಷಿತ ಶಿವಣ್ಣ ಅಭಿನಯದ ಈ ಚಿತ್ರದಲ್ಲಿ, ರುಕಿಣಿ ವಸಂತ್‌, ರಾಹುಲ್‌ ಬೋಸ್‌‍, ಅವಿನಾಶ್‌, ದೇವರಾಜ್‌‍, ಮಧು ಗುರುಸ್ವಾಮಿ, ಛಾಯಾ ಸಿಂಗ್‌, ಬಾಬು ಹಿರಣ್ಣಯ್ಯ ಮುಂತಾದವರು ಸಾತ್‌ ನೀಡಿದ್ದಾರೆ. ನವೀನ್‌ ಕುಮಾರ್‌ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಭೈರತಿ ರಣಗಲ್‌‍ ಚಿತ್ರಕ್ಕಿದೆ.

RELATED ARTICLES

Latest News