ಬೆಂಗಳೂರು. ಮೇ.29. ಮೈಸೂರು ಜಿಲ್ಲೆ ಕೆ ಆರ್ ನಗರ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನಿರೀಕ್ಷಣ ಜಾಮೀನು ಕೋರಿ ಭವಾನಿ ರೇವಣ್ಣ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನ ಮೇ 31ಕ್ಕೆ ಕಾಯ್ದಿರಿಸಿದೆ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ಟ ಅವರು ವಾದವನ್ನು ಆಲಿಸಿ ತೀರ್ಪನ್ನ ಮೇ 31ಕ್ಕೆ ಕಾಯ್ದಿರಿಸಿದರು.
ಈ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಇವರಿಗೆ ನೋಟಿಸ್ ನೀಡಿಯೇ ಇಲ್ಲ ಆದರೂ ಅವರು ಡಿಐಜಿಗೆ ಪತ್ರ ಬರೆದು ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ಅಲ್ಲದೆ ಪ್ರಕರಣದ ಆರೋಪಿಗಳೊಂದಿಗೆ ಸಂಭಾಷಣೆ ನಡೆಸಿರುವ ಬಗ್ಗೆ ಆಡಿಯೋ ದಾಖಲೆಗಳಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸಂತ್ರಸ್ತ ಮಹಿಳೆಯನ್ನು ಹೆದರಿಸುವ ಸಂಬಂಧ ಆರೋಪಿಗಳೊಂದಿಗೆ ಚರ್ಚೆ ನಡೆಸಿರುವ ಬಗ್ಗೆ ದಾಖಲೆಗಳಿವೆ ಇವರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಸ್ಐಟಿ ವಶದಲ್ಲಿ ಇಟ್ಟು ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಸರ್ಕಾರಿ ಪರವಕೀಲರಾದ ಜಗದೀಶ್ ಅವರು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭವಾನಿ ರೇವಣ್ಣ ಅವರ ಪರ ವಕೀಲರು ಇಷ್ಟು ದಿನಗಳಾದರೂ ಎಸ್ಐಟಿಯವರು ಯಾವುದೇ ನೋಟಿಸ್ ನೀಡಿಲ್ಲ ನಿರೀಕ್ಷಣಾ ಜಾಮಿನಿಗೆ ಅರ್ಜಿ ಸಲ್ಲಿಸಿದ ಮೇಲೆ ಈ ರೀತಿ ಆಕ್ಷೇಪಗಳನ್ನ ಮಾಡುತ್ತಿದ್ದಾರೆ ಆರೋಪಿಗಳೊಂದಿಗೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಗಳು ಸತ್ಯಕ್ಕೆ ದೂರವಾದ ವಿಷಯ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು ಎರಡು ಕಡೆಯ ವಾದಗಳನ್ನ ಆಲಿಸಿದ ನ್ಯಾಯಾಧೀಶರು ತೀರ್ಪನ್ನ ಮೇ 31ಕ್ಕೆ ಕಾಯ್ದಿರಿಸಿದರು.