ಹರ್ದೋಯ್, ಮೇ 20-ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ರಾಜಧಾನಿ ಎಕ್ಸ್ಪ್ರೆಸ್ ಸೇರಿದಂತೆ ಎರಡು ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನ ವಿಫಲವಾಗಿದೆ. ಲೋಕೋ ಪೈಲಟ್ಗಳ ಜಾಗರೂಕತೆಯಿಂದಾಗಿ ನಡೆಯುತ್ತಿದ್ದ ದುರಂತ ತಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳು ದಲೇಲ್ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವಿನ ಹಳಿಗೆ ಅರ್ಥಿಂಗ್ ವೈರ್ ಬಳಸಿ ಮರದ ದಿಮ್ಮಿಗಳನ್ನು ಕಟ್ಟಿದ್ದಾರೆ. ದೆಹಲಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ಹೋಗುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ (20504) ನ ಲೋಕೋ ಪೈಲಟ್ ದೂರದಲ್ಲೇ ಹಳಿ ಮೇಲೆ ವಸ್ತು ಗಮನಿಸಿ ನಂತರ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ.
ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರತೆ ಎಂದು ಪೊಲೀಸರು ತಿಳಿಸಿದ್ದಾರೆ. ಕಠೋಡಮ್ ಎಕ್ಸ್ಪ್ರೆಸ್ ರೈಲನ್ನು ಸಹ ಹಳಿತಪ್ಪಿಸಲು ಎರಡನೇ ಪ್ರಯತ್ನ ಮಾಡಲಾಯಿತು. ಲೋಕೋ ಪೈಲಟ್ ಜಾಗೃತಗೊಳಿಸಿ ಇದನ್ನು ಕೂಡ ತಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸೂಪರಿಂಟೆಂಡೆಂಟ್ ನೀರಜ್ ಕುಮಾರ್ ಜದೌನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸರ್ಕಾರಿ ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡಗಳು ಘಟನೆ ಕುರಿತು ತನಿಖೆ ನಡೆಸುತ್ತಿವೆ.