Sunday, July 13, 2025
Homeರಾಷ್ಟ್ರೀಯ | Nationalಬಿಹಾರ ಚುನಾವಣೆ ; ತೇಜಸ್ವಿ ಮನೆಯಲ್ಲಿ ಇಂಡಿ ನಾಯಕರ ಸಭೆ

ಬಿಹಾರ ಚುನಾವಣೆ ; ತೇಜಸ್ವಿ ಮನೆಯಲ್ಲಿ ಇಂಡಿ ನಾಯಕರ ಸಭೆ

Bihar elections: INDIA bloc kicks off strategy meet at Tejashwi's house; focus on seat allocation

ಪಾಟ್ನಾ, ಜು. 13: ಬಿಹಾರ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಇಂಡಿಯಾ ಮೈತ್ರಿಕೂಟವು ಪಾಟ್ನಾದಲ್ಲಿ ಒಂದು ಪ್ರಮುಖ ಕಾರ್ಯತಂತ್ರದ ಸಭೆ ನಡೆಸಿತು. ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌‍ ಅವರ ನಿವಾಸದಲ್ಲಿ ಸುಮಾರು 6 ಗಂಟೆಗಳ ಕಾಲ ಸಭೆ ನಡೆಸಿದ್ದು, ಸೀಟು ಹಂಚಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಕಾಂಗ್ರೆಸ್‌‍, ಎಡ ಪಕ್ಷಗಳು ಮತ್ತು ವಿಕಾಶ್‌ಶೀಲ್‌‍ ಇನ್ಸಾನ್‌ ಪಕ್ಷದ ಉನ್ನತ ನಾಯಕರು ಕೂಡ ಸಭೆಯಲ್ಲಿ ಹಾಜರಿದ್ದರು.ಸಭೆಯ ನಂತರ, ತೇಜಸ್ವಿ ಯಾದವ್‌ ಮಾಧ್ಯಮಗಳೊಂದಿಗೆ ಬಳಿ ಮಾತನಾಡಿ, ಹೌದು, ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಆದರೆ ಹೆಚ್ಚಿನ ವಿಚಾರವನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ, ಎಲ್ಲವೂ ನಿರ್ಧಾರವಾದ ಬಳಿಕ ತಿಳಿಸಲಾಗುವುದು ಎಂದಿದ್ದಾರೆ.

ತೇಜಸ್ವಿ ಯಾದವ್‌ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೂ ದಾಳಿ ನಡೆಸಿದರು. ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರ ಮೇಲೂ ಅವರು ವಾಗ್ದಾಳಿ ನಡೆಸಿದರು. ಪ್ರಸ್ತುತ ಸರ್ಕಾರ ಅವರ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಅವರು ಹೇಳಿದರು.

ನಾವು ಯುವಕರಿಗಾಗಿ ಯುವ ಆಯೋಗ ಮತ್ತು ವೃದ್ಧರ ಪಿಂಚಣಿ ಹೆಚ್ಚಿಸುವ ಬಗ್ಗೆ ಮಾತನಾಡಿದ್ದೆವು, ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಈ ಜನರು ಶೀಘ್ರದಲ್ಲೇ ನಮ್ಮ ಮೈ ಬೆಹನ್‌ ಸಮ್ಮಾನ್‌ ಯೋಜನೆಯನ್ನು ನಕಲು ಮಾಡುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ಅವರು ಹೇಳಿದರು.

ಈ ಯೋಜನೆಯಡಿಯಲ್ಲಿ, ಆರ್‌ಜೆಡಿ ಸರ್ಕಾರ ರಚಿಸಿದರೆ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಸಾರ್ವಜನಿಕರು ಎನ್‌ಡಿಎ ಸರ್ಕಾರದಿಂದ ಬೇಸತ್ತಿದ್ದಾರೆ ಏಕೆಂದರೆ ಅದಕ್ಕೆ ಸ್ಪಷ್ಟ ದೃಷ್ಟಿಕೋನವಿಲ್ಲ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರಂತರವಾಗಿ ಹದಗೆಡುತ್ತಿದೆ ಎಂದರು.

ಬಿಹಾರದಲ್ಲಿ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಲು ಇಂಡಿಯಾ ಮೈತ್ರಿಕೂಟವು ಗಂಭೀರವಾಗಿ ಕಾರ್ಯತಂತ್ರ ರೂಪಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಮತ್ತು ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಬಲವಾಗಿದೆ.

RELATED ARTICLES

Latest News