Sunday, May 19, 2024
Homeರಾಜ್ಯಬೈಕ್ ವೀಲ್ಹಿಂಗ್ ಹುಚ್ಚಾಟಕ್ಕೆ ಯುವಕ ಸಾವು..

ಬೈಕ್ ವೀಲ್ಹಿಂಗ್ ಹುಚ್ಚಾಟಕ್ಕೆ ಯುವಕ ಸಾವು..

ನೆಲಮಂಗಲ,ಫೆ.26- ಬೈಕ್ ವೀಲಿಂಗ್ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯ ನವಯುಗ ಟೋಲ್ ಬಳಿ ರಾತ್ರಿ ನಡೆದಿದೆ.
ದಾಸರಹಳ್ಳಿ ಮೂಲದ ರಾಜೇಶ್(20) ಮೃತ ಯುವಕ. ರಾತ್ರಿ ಒಂದು ಘಂಟೆ ಸುಮಾರಿಗೆ ತಂಡ ತಂಡವಾಗಿ ನವಯುಗ ಟೋಲ್‍ನ ಎಕ್ಸಪ್ರೆಸ್ ಹೈವೇಗೆ ಬಂದ ವೀಲಿಂಗ್ ಪುಂಡರು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನವಯುಗ ಟೋಲ್ ಬಳಿ ಜಮಾಯಿಸಿ ನಂತರ ತಂಡ ತಂಡವಾಗಿ ನೆಲಮಂಗಲದವರೆಗೆ ವೀಲೀಂಗ್ ಮಾಡಿಕೊಂಡು ಬಂದಿದ್ದಾರೆ.

ನೆಲಮಂಗಲದ ಸುಭಾಷ್‍ನಗರದ ಬಳಿಯಿರುವ ಟೋಲ್ ಹತ್ತಿರ ವಾಪಸ್ಸು ಬೆಂಗಳೂರು ಕಡೆಗೆ ಹೋಗುವ ಸಲುವಾಗಿ ಹೆದ್ದಾರಿ ಡಿವೈಡರ್ ಹತ್ತಿಸುತ್ತಿದ್ದಾಗ ಇದೇ ತಂಡದ ಶಾಹಿಲ್ ವೀಲಿಂಗ್ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವೀರಪ್ಪನ್ ಪುತ್ರಿಯ ವಿದ್ಯಾಭ್ಯಾಸಕ್ಕೆ ಸಹಕರಿಸಿತ್ತು ಆರ್‌ಎಸ್‌ಎಸ್

ಗಾಯಗೊಂಡಿದ್ದ ಶಾಹಿಲ್‍ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದ್ದು, ಆತನ ಸ್ಥಿತಿಯೂ ಗಂಭೀರವಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News