Saturday, February 24, 2024
Homeರಾಷ್ಟ್ರೀಯಬಿಲ್ಕಿಸ್ ಬಾನೋ ಪ್ರಕರಣ : ಶರಣಾಗಲು ಕಾಲಾವಕಾಶ ಕೇಳಿದ ಆರೋಪಿಗಳು

ಬಿಲ್ಕಿಸ್ ಬಾನೋ ಪ್ರಕರಣ : ಶರಣಾಗಲು ಕಾಲಾವಕಾಶ ಕೇಳಿದ ಆರೋಪಿಗಳು

ನವದೆಹಲಿ,ಜ.18- ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಗಳಲ್ಲಿ ಒಬ್ಬರಾದ ಗೋವಿಂದಭಾಯ್ ನ್ಯಾಯ್ ಅವರು ತಮ್ಮ ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಉಲ್ಲೇಖಿಸಿ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ. ಜನವರಿ 8 ರಂದು ಮಹತ್ವದ ತೀರ್ಪಿನಲ್ಲಿ, 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ 11 ಜನರಿಗೆ ಕ್ಷಮೆ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಮಾತ್ರವಲ್ಲ, ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಅಪರಾಧಿಗಳು ಜನವರಿ 22 ರೊಳಗೆ ಶರಣಾಗುವಂತೆ ನ್ಯಾಯಾೀಧಿಶರು ಸೂಚಿಸಿದ್ದರು. ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ಗೋವಿಂದ ಭಾಯ್ ಅವರು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ ವಿಸ್ತರಣೆ ಕೋರಲು ಹಲವು ಕಾರಣಗಳನ್ನು ನೀಡಿದ್ದಾರೆ. 88 ವರ್ಷದ ಹಾಸಿಗೆ ಹಿಡಿದಿರುವ ತಂದೆ ಮತ್ತು 75 ವರ್ಷದ ತಾಯಿಗೆ ತಾನೊಬ್ಬನೇ ಪಾಲಕನಾಗಿದ್ದು, ನನ್ನ ಮೇಲೆ ಅವರು ಸಂಪೂರ್ಣ ಅವಲಂಬಿತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಮೂಲದ ಸಿಂಗಾಪುರ ಸಚಿವ ರಾಜೀನಾಮೆ

ತನ್ನ ಇಬ್ಬರು ಮಕ್ಕಳ ಆರ್ಥಿಕ ಅಗತ್ಯಗಳಿಗೂ ತಾವೇ ಜವಾಬ್ದಾರರು ಎಂದು ಹೇಳಿರುವ ಅವರು, ಕೊನೆಯದಾಗಿ, ಅವರು ನಾನು ಕೂಡ ಅನಾರೋಗ್ಯದಿಂದ ನರಳುತ್ತಿರುವುದರಿಂದ ಶರಣಾಗಲು ಕಾಲಾವಕಾಶ ಕೋರಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ತಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಮತ್ತು ಬಿಡುಗಡೆ ಆದೇಶದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಿದ್ದೇನೆ ಎಂದು ನ್ಯಾಯ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನೊ ಮತ್ತು ಅವಳ ಇಬ್ಬರು ಮಕ್ಕಳು ಮಾತ್ರ 2002 ರ ಗಲಭೆಗಳ ಸಮಯದಲ್ಲಿ ಬೆನ್ನಟ್ಟಿದ ಮತ್ತು ದಾಳಿಗೊಳಗಾದ ಗುಂಪಿನಲ್ಲಿ ಬದುಕುಳಿದಿದ್ದರು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ ಪುರುಷರ ಬಿಡುಗಡೆಯು ರಾಷ್ಟ್ರವ್ಯಾಪಿ ಕೋಪವನ್ನು ಹುಟ್ಟುಹಾಕಿತ್ತು.

RELATED ARTICLES

Latest News